ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರಾಜ್ಯಮಟ್ಟದ ಸಾಂಸ್ಕೃತಿಕ ಮೇಳ: ಕೆಎಸ್‌ಎಸ್ ಕಾಲೇಜ್‌ಗೆ ಪ್ರಶಸ್ತಿ

Lingaraj Badiger
Updated On : 7 Sept 2013, 12:00 pm

ಸುಬ್ರಹ್ಮಣ್ಯ: ಮೈಸೂರಿನ ವಿಶ್ವ ಮಾನವ ವಿದ್ಯಾರ್ಥಿ ಯುವ ವೇದಿಕೆ ವತಿಯಿಂದ ಇತ್ತೀಚೆಗೆ ಕಲಾ ಮಂದಿರದಲ್ಲಿ ಆಯೋಜಿಸಿದ್ದ 2 ದಿನಗಳ ರಾಜ್ಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಮೇಳದಲ್ಲಿ ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿಗೆ ನಾಲ್ಕು ಪ್ರಶಸ್ತಿ ಲಭಿಸಿದೆ.
ಸಮೂಹ ನೃತ್ಯದಲ್ಲಿ ಪ್ರಥಮ, ಶಾಸ್ತ್ರೀಯ ನೃತ್ಯ (ಸಮೂಹ), ಮೈಮ್ ಶೋ ಹಾಗೂ ಜಾನಪದ ಗೀತೆ (ವೈಯಕ್ತಿಕ) ಯಲ್ಲಿ ದ್ವಿತೀಯ ಪ್ರಶಸ್ತಿ ಬಂದಿರುತ್ತದೆ.
ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಬಾಲಕೃಷ್ಣ ಪೈ ನೇತೃತ್ವದಲ್ಲಿ ಕಾಲೇಜಿನ ಸಾಂಸ್ಕೃತಿಕ ತಂಡದಲ್ಲಿ ಕಾಲೇಜಿನ ಕಿರಣ್ ಎನ್.ಡಿ. ಮೇಘಾ ಕಾನಡ್ಕ, ಅಶ್ವಿನಿ, ನಿಶಾ ಭಟ್, ಸಂಧ್ಯಾಶ್ರೀ, ಪೂಜಾ ಕೆ.ಪಿ., ಭುವನಜ್ಯೋತಿ, ವರ್ಗಿಸ್, ಪ್ರಜ್ವಲ್, ಜಲಜಾಕ್ಷಿ, ಅಶ್ವಿನಿ, ಸುಶ್ಮಾ ಮತ್ತು ಕಾವ್ಯ ಪಾಲ್ಗೊಂಡಿದ್ದರು. ಉಪನ್ಯಾಸಕಿ ಶಶಿ ಸಹಕರಿಸಿದರು.
ವಿಜೇತ ತಂಡ ಮೈಸೂರು ದಸರಾದಲ್ಲಿ ನಡೆಯುವ ಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾ ಪ್ರದರ್ಶನ ನೀಡಲು ಆಯ್ಕೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement