ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಗೆ ಒತ್ತು

Vishwanath S
Updated On : 8 Sept 2013, 11:47 am

ಮಂಗಳೂರು: ವಿಜ್ಞಾನಕ್ಕೆ ಸಂಬಂಧಿಸಿದ ಶಿಕ್ಷಣ ಸಂಶೋಧನೆಗಳಲ್ಲಿ ಸಂಶೋಧನೆಗಳು ಸರಿಯಾಗಿ ನಡೆಯಬೇಕು. ಕೈಗಾರಿಕಾ ಸಂಸ್ಥೆಗಳಿಗೆ ಭೇಟಿ ನೀಡಿ ಸಂಶೋಧನೆಯನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಶನಿವಾರ ನಗರದ ಜೆಪ್ಪಿನಮೊಗರು ಯೇನೆಪೋಯ ಶಾಲೆಯಲ್ಲಿ ಎರಡು ದಿನಗಳ ಪ್ರಾದೇಶಿಕ ವಿಜ್ಞಾನ ಸಮಾವೇಶ ಸಮಾರೋಪದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಿಸಿ ಮಾತನಾಡಿದರು.
ಶಿಕ್ಷಣದ ಜತೆ ಇತರೆ ಚಟುವಟಿಕೆಯನ್ನೂ ನಡೆಸಬೇಕು. ಶಿಕ್ಷಣ ಪಡೆದು ವಿದೇಶಕ್ಕೆ ಹೋಗುವ ಬದಲು ಇಲ್ಲಿಯೇ ಉದ್ಯೋಗ ಮುಂದುವರಿಸುವಂತಾಗಬೇಕು. ಉತ್ತಮ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು. ಇಂಥ ವಿಜ್ಞಾನ ಸಮಾವೇಶ ಪ್ರತಿ ಜಿಲ್ಲೆಯಲ್ಲಿ ನಡೆಯಬೇಕು ಎಂದು ಆಶಿಸಿದರು.
ಯೇನೆಪೋಯ ವಿಶ್ವವಿದ್ಯಾಲಯ ಕುಲಪತಿ ವೈ.ಅಬ್ದುಲ್ಲ ಕುಂಞ ಅಧ್ಯಕ್ಷತೆ ವಹಿಸಿದ್ದರು. ಯೇನೆಪೋಯ ವಿವಿ ಉಪಕುಲಪತಿ ಡಾ.ಚಂದ್ರಮೋಹನ್, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ದೇಶಕ ಪ್ರೊ.ಕೆ.ವಿ.ರಾವ್, ಕಣ್ಣೂರು ವಿಶ್ವವಿದ್ಯಾಲಯ ಮಾಜಿ ಕುಲಪತಿ ಪ್ರೊ.ಅಬ್ದುಲ್ ರಹಿಮಾನ್, ಭಾರತೀಯ ವಿಜ್ಞಾನ ಸೊಸೈಟಿ ಅಧ್ಯಕ್ಷ ನಾರಾಯಣ ಐಯರ್, ಕಾಲೇಜು ಪ್ರಾಂಶುಪಾಲ ಡಾ.ಸಿ.ಕೆ.ಮಂಜುನಾಥ್ ಹಾಜರಿದ್ದರು.
ವಿವೇಕಾನಂದಕ್ಕೆ ಪ್ರಥಮ ಚಿನ್ನ: ಪ್ರಾದೇಶಿಕ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಯಲ್ಲಿ ಪುತ್ತೂರು ವಿವೇಕಾನಂದ ಇಂಗ್ಲೀಷ್ ಮಾಧ್ಯಮ ಹೈಸ್ಕೂಲ್‌ನ ಮೇಘನಾ ಪ್ರಥಮ ಚಿನ್ನದ ಪದಕ ಪಡೆದರು. ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಅಕ್ಷಯ ಮತ್ತು ಮಹಮ್ಮದ್ ತಬೀಷ್ ಹಸನ್ ದ್ವಿತೀಯ, ವಿದ್ಯಾನಗರ ಕುಮಾರಸ್ವಾಮಿ ವಿದ್ಯಾಲಯದ ವಿಸ್ಮಯ ದೇವಸ್ಯ ತೃತೀಯ ಚಿನ್ನದ ಪದಕ ಪಡೆದುಕೊಂಡರು. ಈ ಸಮಾವೇಶದಲ್ಲಿ 7 ಚಿನ್ನ, 12 ಬೆಳ್ಳಿ, 18 ಮಂದಿ ವಿದ್ಯಾರ್ಥಿಗಳು ಕಂಚಿನ ಪದಕ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement