ಇಂದ್ರಪ್ರಸ್ಥ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ಉಪ್ಪಿನಂಗಡಿ: ಮಂಗಳೂರಿನ ಯೆನಪೋಯ ಶಾಲೆಯಲ್ಲಿ ಇತ್ತೀಚೆಗೆ ನಡೆದ ಇನ್ಸೆಫ್ ಪ್ರಾದೇಶಿಕ ವಿಜ್ಞಾನ ಮೇಳದಲ್ಲಿ ಭಾಗವಹಿಸಿದ್ದ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳು ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇಂದ್ರಪ್ರಸ್ಥ ಶಾಲೆಯಿಂದ ಒಟ್ಟು ನಾಲ್ಕು ತಂಡಗಳು ಭಾಗವಹಿಸಿದ್ದು, ಅಕ್ಷಯ್ ಜಿ.ಕೆ. ಹಾಗೂ ಮಹಮ್ಮದ್ ತಾಬಿಶ್ ಹಸನ್ ಮಂಡಿಸಿದ 'ಗ್ರೀನ್ ಹಾರ್ಟ್- ದಿ ಬೆಸ್ಟ್ ವೇ ಟು ರೆಡ್ಯುಸ್ ದಿ ರಿಲೀಸ್ ಆಫ್ ಕಾರ್ಬನ್ ಡೈ ಆಕ್ಸಡ್ ಇಂಟು ದಿ ಅಟ್ಮಸ್ಟ್ಸ್ಪಿಯರ್' ಎಂಬ ಯೋಜನೆಗೆ ಗ್ರಾಂಡ್ ಗೋಲ್ಡ್ ಪಾರಿತೋಷಕ ದೊರಕಿದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಮತ್ತೊಬ್ಬ ವಿದ್ಯಾರ್ಥಿನಿ ಅನುಷಾ ಕೆ. ಮಂಡಿಸಿದ 'ನಾವೆಲ್ ಪ್ರಾಡಕ್ಟ್ಸ್ ಫ್ರಾಮ್ ಯುಫೋರ್ಬಿಯಾ ನೆರಿಫೋಲಿಯಾ ಟು ಕಂಟ್ರೋಲ್ ಇನ್ಸೆಕ್ಟ್ಸ್' ಎಂಬ ಯೋಜನೆಗೆ ಚಿನ್ನದ ಪದಕ ಪಡೆದಿದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶ್ರೀವರ ಹಾಗೂ ಅಬೂಬಕ್ಕರ್ ಅಯಾನ್ ಪ್ರಸ್ತುತಪಡಿಸಿದ 'ನಾವೆಲ್ ವೇ ಟು ಎಕ್ಟ್ರಾಕ್ಟ್ ಕ್ಯಾಲ್ಸಿಯಂ ಕಾರ್ಬೋನೇಟ್ ಫ್ರಂ ಟರ್ಮಿನಾಲಿಯಾ ಎಲ್ಲೆಪ್ಟಿಕಾ' ಎಂಬ ಯೋಜನೆಗೆ ರಜತ ಪದಕ ದೊರಕಿದೆ. ಅಭಿಲಾಷ್ ಕೆ. ಜಾರ್ಜ್ ಹಾಗೂ ತುಷಾರ್ ಎಂ. ಶೆಟ್ಟಿ ಮಂಡಿಸಿದ 'ಆಂಟಿಸೆಪ್ಟಿಕ್ ಕ್ರೀಮ್ ಫ್ರಂ ಕೋಕೋಸ್ ನ್ಯುಸಿಫೆರಾ ಲಿಕ್ವಿಡ್ ಎಂಡೋಸ್ಪರ್ಮ್' ಎಂಬ ಯೋಜನೆಗೆ ರಜತ ಪದಕ ಪಡೆದಿದ್ದಾರೆ ಎಂದು ಶಾಲೆಯ ಮುಖ್ಯಸ್ಥರು ತಿಳಿಸಿದ್ದಾರೆ.