ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿದ್ಯಾರ್ಥಿನಿ ಬೆನ್ನಿಗೆ ಬಾಸುಂಡೆ ಬರಿಸಿದ ಶಿಕ್ಷಕಿ

Mainashree
Updated On : 8 Sept 2013, 11:29 am

ಪಾಂಡವಪುರ: ಇಂಗ್ಲಿಷ್ ನೋಟ್ಸ್ ಸರಿಯಾಗಿ ಬರೆದಿಲ್ಲ ಎಂಬ ಕಾರಣಕ್ಕಾಗಿ ಶಿಕ್ಷಕಿಯೊಬ್ಬರು 3ನೇ ತರಗತಿಯ ವಿದ್ಯಾರ್ಥಿನಿಯ ಬೆನ್ನಿಗೆ ಬಾಸುಂಡೆ ಬರುವಂತೆ ಹೊಡೆದು ಶಿಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಪಟ್ಟಣದ ನಿರ್ಮಲ ಕಾನ್ವೆಂಟ್ ಶಾಲೆಯ ಶಿಕ್ಷಕಿ ವಿಜಯ ಎಂಬುವರೇ ವಿದ್ಯಾರ್ಥಿನಿಗೆ ಶಿಕ್ಷೆ ನೀಡಿದವರು. ಟೈಲರ್ ರಾಜೇಶ್ ಪುತ್ರಿ ಪಲ್ಲವಿ ಶಿಕ್ಷೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ಧಾಳೆ.
 ಪೋಷಕರು ಬಿಇಓಗೆ ಈ ಬಗ್ಗೆ ದೂರು ನೀಡಿದ್ದಾರೆ. ತನಿಖೆ ಮಾಡಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಬಾಲಕಿಯ ಪೋಷಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement