14, 15ರಂದು ಮಾನವ ಹಕ್ಕುಗಳ ರಾಷ್ಟ್ರೀಯ ಸಮಾವೇಶ: ಪಿ.ಬಿ.ಡೇಸಾ
ಮಂಗಳೂರು: ಬಲ್ಮಠ ಬಿಷಪ್ ಜತ್ತನ್ನ ಹಾಲ್ನಲ್ಲಿ ಸೆ.14, 15ರಂದು ಪಿಯುಸಿಎಲ್ ರಾಷ್ಟ್ರೀಯ ಸಮಾವೇಶ ಆಯೋಜಿಸಿದೆ. ಕೇಂದ್ರ ಸಮಿತಿ ಪದಾಧಿಕಾರಿಗಳಾದ ಪ್ರಭಾಕರ ಸಿನ್ಹಾ, ಬಿನಾಯಕ್ ಸೇನ್, ರವಿಕಿರಣ್ ಜೈನ್, ಸಂಜಯ್ ಪಾರೀಕ್, ವಿ.ಸುರೇಶ್ ಕವಿತಾ ಶ್ರೀವಾಸ್ತವ ಮೊದಲಾದವರು ಭಾಗವಹಿಸುವರು ಎಂದು ಉಪಾಧ್ಯಕ್ಷ ಪಿ.ಬಿ.ಡೇಸಾ ಹೇಳಿದರು.
ಪೊಲೀಸ್ ದೌರ್ಜನ್ಯ ವಿರುದ್ಧ ಹೋರಾಟ, ತಾರತಮ್ಯ, ಜಾತಿವಾದ, ಕೋಮುವಾದ ವಿರುದ್ಧ ಹೋರಾಟ, ಮಾಧ್ಯಮಗಳ, ಸ್ತ್ರೀಯರ, ಮಕ್ಕಳ ಮತ್ತು ಸಮಾಜದ ದುರ್ಬಲ ವರ್ಗದವರ ಸ್ವಾತಂತ್ರ್ಯ ರಕ್ಷಣೆಗೆ ಚಳವಳಿ. ಕಾನೂನು ಆಡಳಿತಕ್ಕೆ ಒತ್ತಾಯ, ಭಯೋತ್ಪಾದನೆ ವಿಚಾರವಾಗಿಯೂ ಈ ಸಮಾವೇಶದಲ್ಲಿ ಚಿಂತನ, ಮಂಥನ ನಡೆಯಲಿದೆ. ದೇಶಾದ್ಯಂತ ಶಾಲೆ ಮಕ್ಕಳಿಗೆ ಬಿಸಿಯೂಟ ಆದೇಶನೀಡಿದ್ದು ಪಿಯುಸಿಎಲ್, ಸುಪ್ರೀಂಕೋರ್ಟ್ನಲ್ಲಿ ಹೂಡಿದ ಆದೇಶ ಪರಿಣಾಮ. ನಗರ ನಿರಾಶ್ರಿತರಿಗೆ ಚಳಿಗಾಲದಲ್ಲಿ ಬೆಚ್ಚನೆ ಕಂಬಳಿ ಒದಗಿಸಬೇಕು ಎಂಬ ತೀರ್ಪು ಕೂಡಾ ಪಿಯುಸಿಲ್ ರಿಟ್ ಅರ್ಜಿಯ ಪರಿಣಾಮ ಲಭಿಸಿದೆ ಎಂದರು. ಯಾವುದೇ ದೇಣಿಗೆ ಸ್ವೀಕರಿಸುವುದಿಲ್ಲ, ಆದರೆ, ಸಾರ್ವಜನಿಕ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಾನವಹಕ್ಕುಗಳ ಕಾಳಜಿ ಉಳ್ಳ ನಾಗರಿಕರು ಧನ ಸಹಾಯ ಮಾಡಬಹುದು ಎಂದರು.