50 ಮೀ. ಕ್ಯಾನ್ವಾಸ್ನಲ್ಲಿ ನೇತ್ರಾವತಿ ದೌರ್ಜನ್ಯ ಚಿತ್ರಣ
ಮಂಗಳೂರು: ಸೇಂಟ್ ಅಲೋಶಿಯಸ್ ಕಾಲೇಜ್ನಲ್ಲಿ ಕರಾವಳಿ ಚಿತ್ರಕಲಾ ಚಾವಡಿ ಸಹಯೋಗದಲ್ಲಿ ಜನ, ಜನ ಜಾಗೃತಿ, ಪಶ್ಚಿಮ ಘಟ್ಟದ ಸಂಪತ್ತು ಮತ್ತು ನೇತ್ರಾವತಿ ನದಿ ಮುಂದಿರುವ ಸವಾಲುಗಳ ಕುರಿತ ಕಾರ್ಯಕ್ರಮ ನಡೆಯಿತು. ಕರಾವಳಿ ಚಿತ್ರಕಲಾ ಚಾವಡಿ ಸಹಯೋಗದೊಂದಿಗೆ 25 ಕಲಾವಿದರು 50 ಮೀ. ಉದ್ದದ ಕ್ಯಾನ್ವಾಸ್ನಲ್ಲಿ ಪರಿಸರ ಮೇಲಾಗುತ್ತಿರುವ ದೌರ್ಜನ್ಯ ಬಗ್ಗೆ ಚಿತ್ರ ರಚಿಸಿದರು ಈ ಕಲಾಕೃತಿಗಳು ಕೇವಲ ಒಂದುಗಂಟೆ ಯಲ್ಲಿ ಮೂಡಿ ಬಂದವು. ಪಶ್ಚಿಮ ಘಟ್ಟ, ಶೋಲಾ ಹುಲ್ಲುಗಾವಲು, ನೇತ್ರಾವತಿ ನದಿ ಪರಿಸರ ಬೃಹತ್ ಕ್ಯಾನ್ವಾಸ್ನಲ್ಲಿ ಮೂಡಿ ಬಂತು.
ಕುದುರೆಮುಖ ವನ್ಯಜೀವಿ ಪ್ರತಿಷ್ಠಾನ ಸಹ ಸಂಘಟಕ ನೀರೇನ್ ಜೈನ್ ಮಾತನಾಡಿ, ಎತ್ತಿನಹೊಳೆ ನದಿ ನೀರು ತಿರುಗಿಸುವುದು ಕೇವಲ ಕೋಲಾರದ ಜನರಿಗೆ ನೀರು ಕುಡಿಸಲು ಅಲ್ಲ. ನೂರಾರು ಕಿ.ಮೀ. ನೀರು ಹರಿಸಿ, ಕಾಲುವೆಗಳನ್ನು ಒಟ್ಟುಗೂಡಿಸಿ ಕೈಗಾರಿಕೆಗಳಿಗೆ, ಸಣ್ಣ ನೀರಾವರಿಗೆ ನೀರು ಬಳಸು ಯೋಜನೆ ರೂಪಿಸಲಾಗಿದೆ ಎಂದರು.
ಹಚ್ಚ ಹಸಿರ ಶೋಲಾ ಹುಲ್ಲುಗಾವಲು, ಪರ್ವತಗಳ ಸ್ಲೈಡ್ ಶೋ ಪ್ರದರ್ಶಿಸಿದರು. ಗಿಡ ನೆಟ್ಟು ಕಾಡು ಬೆಳೆಸುವುದು ಸುಲಭವಲ್ಲ. ಕುದುರೆಮುಖದಲ್ಲಿ ಕಾಡು ಕಡಿದು ಅಕೇಶಿಯಾ ನೆಟ್ಟರು, ಪರಿಣಾಮ ಇಡೀ ಗುಡ್ಡವೇ ಬರಡಾಯಿತು. ಹೀಗಾಗಿ ಒಮ್ಮೆ ಪಶ್ಚಿಮ ಘಟ್ಟ ಕಾಡುಗಳು ನಾಶವಾದರೆ ಅದನ್ನು ಪೂರ್ಣ ಕಳೆದುಕೊಂಡಂತೆ ಎಂದರು.
ೆಹೋರಾಟ ಕೇವಲ ನೇತ್ರಾವತಿ ನದಿಗೆ ಸೀಮಿತಗೊಳಿಸಬಾರದು. 27 ಕಿರು ಜಲವಿದ್ಯುತ್ ಯೋಜನೆಗಳು ಬರುತ್ತಿವೆ. ವಿದ್ಯಾರ್ಥಿಗಳು ಪರಿಸರದ ಜತೆ ಸಂಪರ್ಕ ಕಡಿದುಕೊಳ್ಳಬಾರದು. ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.