ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಲಿಪ ಶುದ್ಧತೆ ಕಾಪಿಟ್ಟ ಸರ್ವಮಾನ್ಯ ಭಾಗವತ: ನಾ. ಕಾರಂತ ಪೆರಾಜೆ

Rashmi Kasaragodu
Updated On : 12 Sept 2013, 12:30 pm

ಪುತ್ತೂರು: ಆರು ದಶಕಗಳಿಂದ ಒಂದೇ ಶೈಲಿ ಕಾಪಿಟ್ಟುಕೊಂಡ ಬಲಿಪ ನಾರಾಯಣರು ಯಕ್ಷಗಾನದ ಸರ್ವಮಾನ್ಯ ಭಾಗವತ. ಯಾವುದೇ ಹಪಹಪಿಯಿಲ್ಲದೆ ಯಕ್ಷಗಾನವನ್ನೇ ಸರ್ವಸ್ವವನ್ನಾಗಿ ಸ್ವೀಕರಿಸಿ, ಭಾಗವತಿಕೆಯಲ್ಲಿ ಶುದ್ಧತೆ ಕಾಪಾಡಿಕೊಂಡವರು ಎಂದು ಅಂಕಣಕಾರ, ಕಲಾವಿದ ನಾ. ಕಾರಂತ ಪೆರಾಜೆ ಅಭಿಪ್ರಾಯಪಟ್ಟಿದ್ದಾರೆ. ಪುತ್ತೂರಿನ ಸ್ವಾಮಿ ಕಲಾಮಂದಿರದಲ್ಲಿ ಭಾನುವಾರ ಜರುಗಿದ ಯಕ್ಷಗಾನ ಪ್ರದರ್ಶನದ ಸಂದರ್ಭ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರನ್ನು ಅಭಿನಂದಿಸಿ ಮಾತನಾಡಿದ ಅವರು, ನಿರಂತರ ಕ್ರಿಯಾಶೀಲತೆಯ ಬಲಿಪರು 100ಕ್ಕೂ ಮಿಕ್ಕಿ ಪ್ರಸಂಗಗಳನ್ನು ರಂಗದಲ್ಲಿ ಆಡಿಸಲ್ಲ ಸರ್ವಶ್ರೇಷ್ಠ ಭಾಗವತ ಎಂದರು.
ಪುತ್ತೂರು ತೆಂಕಿಲದ ಯಕ್ಷಮಿತ್ರರು ಸ್ವಾಮಿಬಳಗದವರು ಆಯೋಜಿಸಿದ ಸಂಮಾನ ಸಮಾರಂಭದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ. ಶ್ರೀಶಕುಮಾರ್ ಎಂ.ಕೆ. ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಆರಕ್ಷಕ ಠಾಣೆ ಎಸ್.ಐ. ಪ್ರಮೋದ್ ಕುಮಾರ್ ಇದ್ದರು. ಉಪನ್ಯಾಸಕ ಎನ್.ಕೆ. ರಾಮಚಂದ್ರ ಭಟ್ ನಿರ್ವಹಿಸಿದರು. ಬಳಿಕ ನಾಡಿನ ಖ್ಯಾತ ಕಲಾವಿದರ ಸಮ್ಮಿಲನದಲ್ಲಿ 'ಕೀಚಕ ವಧೆ ಬಬ್ರುವಾಹನ' ಪ್ರಸಂಗದ ಪ್ರದರ್ಶನ ಜರುಗಿತು. ಬಲಿಪರ ಹಾಡುಗಾರಿಕೆಯಲ್ಲಿ  ಬಬ್ರುವಾಹನ ಕಾಳಗ ಪ್ರಸಂಗ ಪ್ರದರ್ಶನಗೊಂಡಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement