ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಹಬಾಳ್ವೆ, ಬ್ರಾತೃತ್ವ ದೇಶದ ಪ್ರಗತಿಗೆ ದಾರಿ: ಡಾ.ಹೆಗ್ಗಡೆ

Rashmi Kasaragodu
Updated On : 12 Sept 2013, 12:30 pm

ಬೆಳ್ತಂಗಡಿ: ರಾಷ್ಟ್ರದ ಏಳಿಗೆ ಮತ್ತು ಒಗ್ಗಟ್ಟಿಗೆ ಧಾರ್ಮಿಕ ಆಚರಣೆಗಳು ಕಾರಣವಾಗಿವೆ. ಸಮಾನತೆ, ಸಹಬಾಳ್ವೆ, ಭ್ರಾತೃತ್ವಗಳು ದೇಶದ ಪ್ರಗತಿಗೆ ದಾರಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಬುಧವಾರ ಲಾಯಿಲ ಶ್ರೀವಿಘ್ನೇಶ್ವರ ಕಲಾ ಮಂದಿರದಲ್ಲಿ ನಡೆದ 25ನೇ ವರ್ಷದ ಶ್ರೀ ಗಣೇಶೋತ್ಸವ ಬೆಳ್ಳಿಹಬ್ಬ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾತಿ, ಮತ, ಧರ್ಮ ಮರೆತು ಸಮಾನ ಮನಸ್ಕರಾಗಿ ಸತ್ಕಾರ್ಯಗಳನ್ನು ಮಾಡಿದಾಗ ಸಂಸ್ಕೃತಿಯ ಉಳಿವು ಸಾಧ್ಯ. ನಾನು ನನ್ನದು ಎಂಬ ಅಹಂಭಾವ ಬಿಟ್ಟು ನಮ್ಮದು ಎಂಬ ಭಾವನೆಯ ವಿಶಾಲವಾದ ಚಿಂತನೆಯಿಂದ ಸಾಂಸ್ಕೃತಿಕ ಪಾವಿತ್ರ್ಯತೆ ಉಳಿಯುತ್ತದೆ ಎಂದರು.
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಎಂ. ಮೋಹನ್ ಆಳ್ವ ಮಾತನಾಡಿದರು.
ವೇದಿಕೆಯಲ್ಲಿ ಉಜಿರೆಯ ಡಾ. ಗಂಗಾಧರ ಶೇಖ, ಬಜಪೆ ಮರವೂರು ಪಾಪ್ಯುಲರ್ ಜಂಟ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಂಚಾಲಕ ಪಾಪ್ಯುಲರ್ ಜಗದೀಶ ಶೆಟ್ಟಿ, ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ, ಕಾರ್ಯಾಧ್ಯಕ್ಷ ಆರ್. ರಮೇಶ್ ಇದ್ದರು.
ಗಣೇಶೋತ್ಸವ ಸಮಿತಿ ವತಿಯಿಂದ ವಿಕಲಚೇತನ ವಾಸೀಂ ಅಕ್ರಮ್ಗೆ ಗಾಲಿ ಕುರ್ಚಿ, 25 ಮಹಿಳೆಯರಿಗೆ ಸೀರೆ ಹಾಗೂ ಎಂಡೋಸಲ್ಫಾನ್ ಕೇಂದ್ರಕ್ಕೆ ರು. 25 ಸಾವಿರ ನಗದು ನೀಡಲಾಯಿತು.
ಗೌರವಾಧ್ಯಕ್ಷ ಸುಧಾಕರ ಪೈ ಸ್ವಾಗತಿಸಿದರು. ಕಾರ್ಯದರ್ಶಿ ರುಕ್ಮಯ ಕನ್ನಾಜೆ ನಿರೂಪಿಸಿದರು. ಜತೆ ಕೋಶಾಧಿಕಾರಿ ಜಯರಾಜ್ ಜೈನ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement