ಹಳಿ ಜೋಡಿ ಮಾರ್ಗ ಕಾಮಗಾರಿ: 25ರಿಂದ ರೈಲು ಸಂಚಾರ ಮಾರ್ಪಾಟು
ಮಂಗಳೂರು: ಕೇರಳದ ಶೋರ್ನೂರು ಮತ್ತು ಕಾರಕ್ಕಾಡ್ ರೈಲು ನಿಲ್ದಾಣ ಮಧ್ಯೆ ರೈಲು ಹಳಿ ಜೋಡಿ ಮಾರ್ಗ ಕಾಮಗಾರಿ ಹಿನ್ನಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ವೇಳಾಪಟ್ಟಿಯಲ್ಲಿ ಸೆ.25ರಿಂದ ಅ.16ರ ವರೆಗೆ ಮಾರ್ಪಾಟುಗೊಳಿಸಲಾಗಿದೆ. 14 ರೈಲುಗಳನ್ನು ರದ್ದುಗೊಳಿಸಲಾಗಿದ್ದು, 2 ರೈಲುಗಳ ವೇಳಾಪಟ್ಟಿ ಬದಲಾಯಿಸಲಾಗಿದೆ. 8 ರೈಲುಗಳ ಸಂಚಾರ ನಿಯಂತ್ರಿಸಲಾಗಿದೆ. 7 ರೈಲು ಸಂಚಾರವನ್ನು ಬದಲಾಯಿಸಲಾಗಿದೆ. ಕೊಯಂಬತ್ತೂರ್-ಮಂಗಳೂರು ಸೆಂಟ್ರಲ್ ರೈಲು ಕೊಯಂಬತ್ತೂರ್-ಪಾಲಕ್ಕಾಡ್ ಜಂಕ್ಷನ್ ಹಾಗೂ ಮಂಗಳೂರು ಸೆಂಟ್ರಲ್-ಪಲ್ಲಪುರಂ ಸೆಂಟ್ರಲ್ ಮಧ್ಯೆ ಸಂಚರಿಸಲಿದೆ. ಅದೇ ರೀತಿ ಚೆನ್ನೈ ಎಗ್ಮೋರ್-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ಅ.2ರಿಂದ 15ರ ವರೆಗೆ ನೇರ ಸಂಚಾರ ರದ್ದುಗೊಳಿಸಲಾಗಿದೆ.
ಮಂಗಳೂರು ಸೆಂಟ್ರಲ್-ನಾಗರಕೊಯಿಲ್ ಜಂಕ್ಷನ್ ಎರ್ನಾಡ್ ಎಕ್ಸ್ಪ್ರೆಸ್ಗೆ ಬುಕ್ಕಿಂಗ್ ಮಾಡಿದ ಪ್ರಯಾಣಿಕರಿಗೆ ಕುಟ್ಟಿಪುರಂ ಮತ್ತು ತ್ರಿಶೂರ್ ಮಧ್ಯೆ ಬಸ್ ಸಂಚಾರ ಏರ್ಪಡಿಸಲಾಗಿದೆ.