ಉಜಿರೆ ಬಳಿ ಅಪಘಾತ: ಬೆಂಗಳೂರಿನ ವ್ಯಕ್ತಿ ಸಾವು
ಬೆಳ್ತಂಗಡಿ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಆಗಮಿಸಿದ ಯಾತ್ರಾರ್ಥಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಉಜಿರೆಯಲ್ಲಿ ಭಾನುವಾರ ಸಂಭವಿಸಿದ್ದು, ಈ ಅವಘಡದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರು ರಾಜಾಜಿನಗರದ ನಿತ್ಯಾನಂದ ಕುಮಾರ್ (30) ಮೃತಪಟ್ಟವರು. ಆದಿತ್ಯ (25), ಹರ್ಷಿತಾ (21), ಪ್ರಜ್ವಲ್ (22) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು ರಾಜಾಜಿನಗರದ ಗೆಳೆಯರ ತಂಡ ಕಾರಿನಲ್ಲಿ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ತೆರಳುತ್ತಿದ್ದರು. ಪೆರಿಯಶಾಂತಿ ಬಳಿ ದಾರಿ ತಪ್ಪಿ ಉಪ್ಪಿನಂಗಡಿಗೆ ಹೋಗಿತ್ತು. ನಂತರ ಗುರುವಾಯನಕೆರೆ ಮೂಲಕ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಬೆಳಗ್ಗಿನ ಜಾವ 5 ಗಂಟೆಗೆ ಉಜಿರೆ ಬೆನಕ ಆಸ್ಪತ್ರೆ ಸಮೀಪ ಧರ್ಮಸ್ಥಳದಿಂದ ಕೊಲ್ಲೂರಿಗೆ ಹೋಗುವ ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಿತ್ಯಾನಂದ್ ಸ್ಥಳದಲ್ಲಿಯೇ ಅಸುನೀಗಿದ್ದಾರೆ.