ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವನ್ಯ ಜೀವಿಗಳಿಗೆ ಪ್ರತ್ಯೇಕ ಸ್ಥಳ ಕಾಯ್ದಿರಿಸುವುದು ಅಗತ್ಯ: ರೈ

Lingaraj Badiger
Updated On : 16 Sept 2013, 11:44 am

ಬಂಟ್ವಾಳ: ವನ್ಯ ಜೀವಿ ಸಂಕುಲದ ರಕ್ಷಣೆ ಆಗತ್ಯವಾಗಿದ್ದು ವನ್ಯಜೀವಿಗಳಿಗಾಗಿ ಸ್ಥಳ ಕಾಯ್ದಿರಿಸುವುದು ಅಗತ್ಯವಾಗಿದೆ. ಮೀಸಲು ಅರಣ್ಯದಲ್ಲಿ ಮನುಷ್ಯರಿಗೆ ವಾಸಕ್ಕೆ ಅವಕಾಶವಿಲ್ಲ. ಇದಕ್ಕಾಗಿ ಅರಣ್ಯ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮ ವ್ಯಾಪ್ತಿಯ ವಗ್ಗದಲ್ಲಿ ವಿವಿಧ ಕಾಮಗಾರಿಗಳನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಬಳಿಕ ವಗ್ಗದ ಪಚ್ಚಾಜೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಸಾರ್ವಜನಿಕ ಅಭಿನಂದನೆ ಸ್ವೀಕರಿಸಿದರು. ಕಾವಳಪಡೂರು ವಗ್ಗದ ಬಾಂಬಿಲ, ಉಗ್ಗಬೆಟ್ಟುವಿನಲ್ಲಿ ಟಿ3 ಸಂಸ್ಥೆಯವರು ನಿರ್ಮಿಸಿದ ಸಾರ್ವಜನಿಕ ಬಸ್ ತಂಗುದಾಣ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ 34 ಲಕ್ಷ ವೆಚ್ಚದಲ್ಲಿ  ನಿರ್ಮಾಣಗೊಳ್ಳಲಿರುವ ಸರ್ಕಾರಿ ಪಪೂ ಕಾಲೇಜು ಪ್ರೌಢಶಾಲೆ ವಿಭಾಗದ ನೂತನ ಕೊಠಡಿಗಳಿಗೆ ಶಂಕು ಸ್ಥಾಪನೆ ಮತ್ತು ನೂತನವಾಗಿ ನಿರ್ಮಿಸಿದ ವೇದಿಕೆಯನ್ನು ಸಚಿವರು ಉದ್ಘಾಟಿಸಿದರು.  ನಂತರ ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ನೂತನ ಕಟ್ಟಡದ ಪ್ರಗತಿ ಪರಿಶೀಲಿಸಿದರು.  ಪಪೂ ಕಾಲೇಜಿನ ರಜತ ಮಹೋತ್ಸವದ ಮನವಿ ಪತ್ರವನ್ನು ಸಚಿವರು ಬಿಡುಗಡೆಗೊಳಿಸಿದರು. ವಗ್ಗದಲ್ಲಿ ಐಟಿಐ, ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಾಪನೆಗಾಗಿ ಮನವಿ ಪತ್ರವನ್ನು ಪಿ. ಜಿನರಾಜ ಆರಿಗ ಅವರು ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement