ಸಾಹಿತಿ ರಾಮಚಂದ್ರ ದೇವಗೆ ಶ್ರದ್ಧಾಂಜಲಿ
ಸುಳ್ಯ: ಇತ್ತೀಚೆಗೆ ನಿಧನರಾದ ಸಾಹಿತಿ, ಬರಹಗಾರ ರಾಮಚಂದ್ರ ದೇವ ಅವರಿಗೆ ಶ್ರದ್ಧಾಂಜಲಿ ಸಭೆ ಸುಳ್ಯದ ಬರಹಗಾರರ ಮತ್ತು ಕಲಾವಿದರ ಒಕ್ಕೂಟ ಹಾಗೂ ಸ್ವಂತಿಕಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗದ ಆಶ್ರಯದಲ್ಲಿ ಸುಳ್ಯ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಸ್ವಂತಿಕಾ ಸಾಹಿತ್ಯ ಬಳಗದ ಅಧ್ಯಕ್ಷ ಜಯಪ್ರಕಾಶ್ ಕುಕ್ಕೇಟಿ, ಬರಹಗಾರರ ಮತ್ತು ಕಲಾವಿದರ ಒಕ್ಕೂಟ ಸಂಚಾಲಕ ಹರೀಶ್ ಬಂಟ್ವಾಳ್, ಸಿಡಿಪಿಒ ನಾರಾಯಣ ನೀರಬಿದಿರೆ, ಆಲೆಟ್ಟಿ ಪ್ರೌಢಶಾಲೆಯ ಪ್ರಭಾರ ಮುಖ್ಯಶಿಕ್ಷಕ ಸುಂದರ ಕೇನಾಜೆ, ಸಾಹಿತಿ ಟಿ.ಜಿ. ಮುಡೂರು, ಪೂವಪ್ಪ ಕಣಿಯೂರು, ಎನ್ಎಂಸಿ ಪ್ರಾಂಶುಪಾಲ ಪ್ರಭಾಕರ ಶಿಶಿಲ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ದಾಮೋದರ ಕಣಜಾಲು, ಜಯಮ್ಮ ಚಟ್ಟಿಮಾಡ, ಅನುರಾಧ ಕುರುಂಜಿ, ಕೆ.ಆರ್. ಗಂಗಾಧರ, ಭೀಮರಾವ್, ಪಿ.ಎಸ್. ಗಂಗಾಧರ, ಎಂ.ಬಿ. ಸದಾಶಿವ, ಜಯರಾಮ ಹಾಡಿಕಲ್ಲು, ಗಂಗಾಧರ ಮಟ್ಟಿ, ಚಂದ್ರಶೇಖರ ಬಿಳಿನೆಲೆ ಇದ್ದರು.