ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹಿಂದೂ ಧರ್ಮ ಹೋರಾಟಕ್ಕೆ ಖಡ್ಗದೀಕ್ಷೆ

Mainashree
Updated On : 15 Sept 2013, 10:34 am

ಮಂಗಳೂರು: ಹಿಂದೂ ಸಮಾಜದ ಯುವಕರಲ್ಲಿ ದೇಶ, ಧರ್ಮಕ್ಕಾಗಿ ಹೋರಾಡುವ ಮನೋಭಾವ ಕಡಿಮೆಯಾಗಿದೆ. ಇದೇ ಕಾರಣಕ್ಕೆ ಹಿಂದೂ ಧರ್ಮದ ಮೇಲೆ ದಾಳಿಯಾಗುತ್ತಿದ್ದು, ಇದನ್ನು ಮಟ್ಟಹಾಕುವ ಸಲುವಾಗಿ ಮುಂದಿನ ದಿನದಲ್ಲಿ 5 ಸಾವಿರ ಯುವಕರಿಗೆ ಖಡ್ಗದೀಕ್ಷೆ ನೀಡಲಾಗುವುದು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಕಾರ್ಯಾಧ್ಯಕ್ಷ ಶ್ರೀಪ್ರಣವಾನಂದ ರಾಮ ಸ್ವಾಮೀಜಿ ಹೇಳಿದರು. ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುವಕರಲ್ಲಿ ಹೋರಾಟ ಮನೋಭಾವ ಮೂಡಿಸಿ ಇನ್ನಷ್ಟು ಜಾಗೃತಿ ಮೂಡಿಸಲಾಗುವುದು. ಈಗಾಗಲೇ ರಾಜ್ಯಾದ್ಯಂತ ಈ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಖಡ್ಗದೀಕ್ಷೆ ಪಡೆದುಕೊಳ್ಳಲು ಹಲವು ಸಂಘಟನೆಗಳ ಯುವಕರು ಮುಂದೆ ಬಂದಿದ್ದಾರೆ ಎಂದರು.
ದುಡ್ಡಿನ ಮೂಲ ತನಿಖೆಯಾಗಲಿ: ಮಂಗಳೂರಿನಲ್ಲಿರುವ ಮುಸ್ಲಿಂ ಯುವಕರಿಗೆ ಸೂಕ್ತ ಕೆಲಸವಿಲ್ಲದೇ ಹೋದರೂ ಐಶಾರಾಮಿ ಕಾರುಗಳಲ್ಲಿ, ಬಂಗ್ಲೆಗಳಲ್ಲಿ ವಾಸವಾಗಿದ್ದಾರೆ. ಇವರಿಗೆಲ್ಲ ಎಲ್ಲಿಂದ ದುಡ್ಡು ಬರುತ್ತಿದೆ ಎಂಬ ಬಗ್ಗೆ ತನಿಖೆಯಾಗಬೇಕು. ಉಗ್ರ ಯಾಸಿನ್ ಭಟ್ಕಳ್ ತನ್ನ ಸಹಚರರೊಂದಿಗೆ ಆರು ತಿಂಗಳು ನಗರದ ಜನನಿಬಿಡ ಪ್ರದೇಶದ ಫ್ಲ್ಯಾಟ್‌ನಲ್ಲಿಯೇ ತಂಗಿದ್ದರೂ ಜಿಲ್ಲಾ ಪೊಲೀಸರಿಗೆ ಆತನ ಚಲನವಲನ ಗೊತ್ತಾಗದಿರುವುದು ಅಚ್ಚರಿ ತಂದಿದೆ. ಆತನ ಬಂಧನದ ಬಳಿಕವಾದರೂ ಪೊಲೀಸರು ಆತ ತಂಗಿದ್ದ ಫ್ಲ್ಯಾಟ್ ಅನ್ನು ಸುಪರ್ದಿಗೆ ತೆಗೆದುಕೊಂಡು ತನಿಖೆ ನಡೆಸಬೇಕಿತ್ತು. ಫ್ಲ್ಯಾಟ್ ಮಾಲೀಕರನ್ನು ಬಂಧಿಸಬೇಕಿತ್ತು. ಇದ್ಯಾವುದನ್ನೂ ಮಾಡದೇ ಕೇವಲ ಹಿಂದೂ ಸಂಘಟನೆಗಳ ಮೇಲೆ ಕಾಕದೃಷ್ಟಿ ಬೀರುವುದು ಸರಿಯಲ್ಲ ಎಂದು ಸ್ವಾಮೀಜಿ ಕಿಡಿಕಾರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement