ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹಿಂದೂ ಧರ್ಮ ಹೋರಾಟಕ್ಕೆ ಖಡ್ಗದೀಕ್ಷೆ

Lingaraj Badiger
Updated On : 16 Sept 2013, 11:41 am

ಮಂಗಳೂರು: ಹಿಂದೂ ಸಮಾಜದ ಯುವಕರಲ್ಲಿ ದೇಶ, ಧರ್ಮಕ್ಕಾಗಿ ಹೋರಾಟ ಕಡಿಮೆಯಾಗಿದೆ. ಇದೇ ಕಾರಣಕ್ಕೆ ಹಿಂದೂ ಧರ್ಮದ ಮೇಲೆ ದಾಳಿಯಾಗುತ್ತಿದೆ. ಇದನ್ನು ಮಟ್ಟಹಾಕುವ ಸಲುವಾಗಿ ಮುಂದಿನ ದಿನದಲ್ಲಿ 5 ಸಾವಿರ ಮಂದಿ ಯುವಕರಿಗೆ ಖಡ್ಗದೀಕ್ಷೆ ನೀಡಲಾಗುವುದು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಕಾರ್ಯಾಧ್ಯಕ್ಷ ಶ್ರೀಪ್ರಣವಾನಂದ ರಾಮ ಸ್ವಾಮೀಜಿ ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಕರಲ್ಲಿ ಹೋರಾಟ ಮನೋಭಾವ ಮೂಡಿಸಿ ಇನ್ನಷ್ಟು ಜಾಗೃತಿ ಮೂಡಿಸಲಾಗುವುದು. ಈಗಾಗಲೇ ರಾಜ್ಯಾದ್ಯಂತ ಈ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಖಡ್ಗದೀಕ್ಷೆ ಪಡೆದುಕೊಳ್ಳಲು ಹಲವು ಸಂಘಟನೆಗಳ ಯುವಕರು ಮುಂದೆ ಬಂದಿದ್ದಾರೆ ಎಂದರು. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಹಿಂದಕ್ಕೆ ಪಡೆದಿರುವುದು, ಸಾಹಿತ್ಯದಲ್ಲಿ ಹಿಂದೂ ದೇವರ ಅವಹೇಳನ, ದೇವಸ್ಥಾನದ ಚಿನ್ನಾಭರಣ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿರುವುದು, ರಾಷ್ಟ್ರ ರಕ್ಷಣೆ, ಸ್ತ್ರೀರಕ್ಷಣೆಗೆ ವಿಫಲವಾದ ಸರ್ಕಾರದ ವಿರುದ್ಧ ಹಿಂದೂ ಸಮುದಾಯ ಹೋರಾಟ ಮಾಡಬೇಕಾಗಿದೆ ಎಂದರು. ರಾಜ್ಯಾಧ್ಯಕ್ಷ ಶ್ರವಣ ಕುಮಾರ್ ರಾಯ್ಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಹಿತ್, ಜಿಲ್ಲಾಧ್ಯಕ್ಷ ರಾಜೇಶ್ ಪೂಜಾರಿ, ಹರೀಶ್ ಆಚಾರ್ಯ ಇದ್ದರು.

ದುಡ್ಡಿನ ಮೂಲ ತನಿಖೆಯಾಗಲಿ
ಮಂಗಳೂರಿನಲ್ಲಿರುವ ಮುಸ್ಲಿಂ ಯುವಕರಿಗೆ ಸರಿಯಾದ ಕೆಲಸವಿದ್ದೇ ಇದ್ದರೂ ಐಶಾರಾಮಿ ಕಾರುಗಳಲ್ಲಿ, ಬಂಗ್ಲೆಗಳಲ್ಲಿ ವಾಸವಾಗಿದ್ದಾರೆ. ಇವರಿಗೆಲ್ಲ ಎಲ್ಲಿಂದ ದುಡ್ಡು ಬರುತ್ತಿದೆ ಎಂಬ ಬಗ್ಗೆ ತನಿಖೆಯಾಗಬೇಕು. ಉಗ್ರ ಯಾಸಿನ್ ಭಟ್ಕಳ್ ತನ್ನ ಸಹಚರರೊಂದಿಗೆ ಆರು ತಿಂಗಳು ನಗರದ ಜನನಿಬಿಡ ಪ್ರದೇಶದ ಫ್ಲ್ಯಾಟ್‌ನಲ್ಲಿ ತಂಗಿದ್ದರೂ ಜಿಲ್ಲಾ ಪೊಲೀಸರಿಗೆ ಆತನ ಚಲನವಲನ ಗೊತ್ತಾಗದಿರುವುದು ಅಚ್ಚರಿ ತಂದಿದೆ. ಆತನ ಬಂಧನ ಬಳಿಕವಾದರೂ ಪೊಲೀಸರು ಆತ ತಂಗಿದ್ದ ಫ್ಲ್ಯಾಟ್‌ನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ತನಿಖೆ ನಡೆಸಬೇಕಿತ್ತು. ಫ್ಲ್ಯಾಟ್ ಮಾಲಕರನ್ನು ಬಂಧಿಸಬೇಕಿತ್ತು. ಇದಾವುದೂ ಮಾಡದೆ ಹಿಂದೂ ಸಂಘಟನೆಗಳ ಮೇಲೆ ಕಾಕದೃಷ್ಟಿ ಬೀರುವುದು ಪೊಲೀಸರ ಕೆಲಸವಾಗಿದ್ದು, ಇದರ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಪ್ರಣವಾನಂದ ರಾಮಸ್ವಾಮೀಜಿ ಕಿಡಿಕಾರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement