ಕಡಂಡೇಲು ಪುರುಷೋತ್ತಮ ಭಟ್ಗೆ ಮಾಣಂಗಾಯಿ ಕೃಷ್ಣ ಭಟ್ ಸ್ಮಾರಕ ಪ್ರಶಸ್ತಿ
ಮೂಲ್ಕಿ: ಕಟೀಲು ಮೇಳದ ಹಿರಿಯ ನಿವೃತ್ತ ಕಲಾವಿದ 97ರ ಹರೆಯದ ಕಡಂಡೇಲು ಪುರುಷೋತ್ತಮ ಭಟ್ಗೆ ದಿ. ಮಾಣಂಗಾಯಿ ಕೃಷ್ಣ ಭಟ್ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತೆಂಕುತಿಟ್ಟು ಯಕ್ಷಗಾನ ಪ್ರತಿಷ್ಠಾನ ಬೆಂಗಳೂರು ಮತ್ತು ಕಟೀಲಿನ ದಿ. ಮಾಣಂಗಾಯಿ ಕೃಷ್ಣ ಭಟ್ ಮನೆಯವರ ಆಶ್ರಯದಲ್ಲಿ ಕಟೀಲಿನ ದಿ. ಮಾಣಂಗಾಯಿ ಕೃಷ್ಣ ಭಟ್ ಸ್ವಗೃಹದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಬಿ. ಬಾಲಚಂದ್ರ ಅವರು ಈ ಪ್ರಶಸ್ತಿ ನೀಡಿದರು.
ಬಿ. ರಾಧಕೃಷ್ಣ, ಬಿ. ಕೇಶವ ಕುಮಾರ್, ಗೋಪಿ ಭಟ್, ಗಣೇಶ್ ಬಾಯರು, ಪ್ರೇಮಾವತಿ, ಗೋವಿಂದ ಭಟ್ ಇದ್ದರು.