ಗೆಳೆಯನ ನೋಡಲು ಆಸ್ಪತ್ರೆಗೆ ಬಂದ ವಿದ್ಯಾರ್ಥಿ ಕರೆಂಟ್ ಶಾಕ್ನಿಂದ ಸಾವು
ಮಂಗಳೂರು: ಜ್ವರ ಪೀಡಿತ ಗೆಳೆಯನನ್ನು ನೋಡಲು ಬಂದ ಕಾಲೇಜ್ ವಿದ್ಯಾರ್ಥಿ ಆಸ್ಪತ್ರೆಗೆ ತಾಗಿಕೊಂಡಂತಿರುವ ವಿದ್ಯುತ್ ತಂತಿಗೆ ಕೈ ತಗುಲಿ ದಾರುಣವಾಗಿ ಮೃತಪಟ್ಟಿದ್ದಾರೆ.
ನಗರದ ಉಳ್ಳಾಲ ನರ್ಸಿಂಗ್ಹೋಮ್ನಲ್ಲಿ ಗೆಳಯ ಮಲೇರಿಯಾ ಪೀಡಿತನಾಗಿ ಚಿಕಿತ್ಸೆ ಪಡೆಯುತ್ತಿದ್ದ. ಆತನ ಆರೋಗ್ಯ ವಿಚಾರಣೆಗೆಂದು ಯಜ್ಞೇಶ್ (21) ಭಾನುವಾರ ರಾತ್ರಿ ಬಂದಿದ್ದ. ರಾತ್ರಿ 10.30ರ ವೇಳೆಗೆ ಆಸ್ಪತ್ರೆ ವರಾಂಡ ಬಳಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದರು.
ಮಾತನಾಡುತ್ತ ಪಕ್ಕದಲ್ಲಿದ್ದ ತಂತಿಯನ್ನು ಹಿಡಿದಿದ್ದರು. ತಕ್ಷಣ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ತಾಗಿಕೊಂಡಂತೆಯೇ ಇರುವ ವಿದ್ಯುತ್ ತಂತಿಯನ್ನು ರಕ್ಷಾ ಕವಚ ಹಾಕದೆ ಹಾಕಲಾಗಿದೆ. ಆಸ್ಪತ್ರೆ ಆಡಳಿತ ಮಂಡಳಿಯೂ ಜೀವಕ್ಕೆ ಬೆಲೆ ನೀಡಿಲ್ಲ, ಮೆಸ್ಕಾಂನವರೂ ಇದು ತಮ್ಮ ಕೆಲಸವಲ್ಲ ಎಂದು ಸುಮ್ಮನೆ ಉಳಿದಿದ್ದರು. ಪರಿಣಾಮ ಅಮಾಯಕ ಜೀವವೊಂದು ಬಲಿಯಾಗಿದೆ.
ಇದೇ ರೀತಿ ಕೆಎಸ್ರಾವ್ರೋಡ್ ಸಹಿತ ಅನೇಕ ಕಡೆ ಕಟ್ಟಡಗಳಿಗೆ ತಾಗಿಕೊಂಡಂತೆಯೇ ವಿದ್ಯುತ್ ತಂತಿಗಳಿವೆ. ಇದರಿಂದ ಆಗಾಗ ಸಾವುನೋವು ಸಂಭವಿಸುತ್ತಿವೆ. ಆದರೆ ಯಾರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ.