ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಮ್ಮ ಕನಸಿನ ಭಾರತ ಪ್ರಬಂಧ ಸ್ಪರ್ಧೆ

Lingaraj Badiger
Updated On : 17 Sept 2013, 12:10 pm

ಮಂಗಳೂರು: ರಾಜ್ಯ ಮರೈನ್ ಎಂಜಿನಿಯರ್ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗಾಗಿ ವಿಶ್ವ ಕಡಲ ದಿನ ಅಂಗವಾಗಿ 'ನಮ್ಮ ಕನಸಿನ ಭಾರತ' ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. 500 ಶಬ್ದಗಳಿಗಿಂತ ಮೀರಿರಬಾರದು. ಹಿಂದಿ, ಇಂಗ್ಲಿಷ್, ಕನ್ನಡದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ವಿಶ್ವ ಕಡಲದಿನದಂದು ಇಬ್ಬರು ವಿಜೇತರಿಗೆ ಬಹುಮಾನ ನೀಡಲಾಗುವುದು. ಸ್ಪರ್ಧಿಗಳು ತಮ್ಮ ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಬೇಕು. ಸೆ.24ರ ಒಳಗೆ ಪ್ರಬಂಧ ಕಳುಹಿಸಬೇಕು. ಹೆಚ್ಚಿನ ವಿವರಗಳಿಗೆ 2454374 ಸಂಪರ್ಕಿಸಬಹುದು. ಇಮೇಲ್ ಝಿಜ್ಞ್ಞಜ್ಞಜ್ಠಜಅಣಝ್ಟ್ಟ.್ಛ್ಟಟ  ಪ್ರಬಂಧ ಕಳುಹಿಸಬಹುದು.
ಅರ್ಜಿ ಆಹ್ವಾನ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಂಚೆ ತೆರಪಿನ 2013-14ನೇ ಸಾಲಿನ ಕೋರ್ಸುಗಳಿಗೆ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೋರ್ಸುಗಳು: ಬಿ.ಎ., ಬಿ.ಕಾಂ., ಬಿ.ಬಿ.ಎಂ., ಎಂ.ಎ(ಕನ್ನಡ, ಇಂಗ್ಲಿಷ್, ಸಮಾಜಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ) ಹಾಗೂ ಎಂ.ಕಾಂ. ಅರ್ಜಿಯನ್ನು ಮಂಗಳೂರು ವಿಶ್ವವಿದ್ಯಾಲಯ ಅಂಚೆ ತೆರಪಿನ ಶಿಕ್ಷಣ ನಿರ್ದೇಶನಾಲಯ, ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಹಂಪನಕಟ್ಟೆ, ಎಫ್‌ಎಂಕೆಎಂ ಕಾರ್ಯಪ್ಪ ಕಾಲೇಜು, ಉಪೇಂದ್ರ ಪೈ ಸ್ಮಾರಕ ಕಾಲೇಜು ಉಡುಪಿ ಇಲ್ಲಿಂದ ಪಡೆಯಬಹುದು. ಸೆ. 27 ದಂಡ ಶುಲ್ಕ ರಹಿತ ಅರ್ಜಿ ಸಲ್ಲಿಸಲು ಕೊನೆ ದಿನ. ಹೆಚ್ಚಿನ ಮಾಹಿತಿಗಾಗಿ 0824-2287824 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement