ಪ್ರಾಚೀನ ವಸ್ತು ಪ್ರದರ್ಶನ ಉದ್ಘಾಟನೆ
ಸುಬ್ರಹ್ಮಣ್ಯ: ಶ್ರೀ ಕ್ಷೇತ್ರದ ಉತ್ತರಾದಿ ಮಠದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 43ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಹಿರಿಯ ನಾಗರಿಕ ಕೆ.ಎಸ್. ಮೂರ್ತಿಯವರಲ್ಲಿರುವ ಪ್ರಾಚೀನ ವಸ್ತುಗಳ ಸಂಗ್ರಹಾಲಯವನ್ನು ಉದ್ಘಾಟಿಸಲಾಯಿತು.
ಯುವ ಉದ್ಯಮಿ ದಿನೇಶ್ ಬಿ.ಎನ್.ಅಪರೂಪದ ಈ ಸಂಗ್ರಹವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೆ.ಎಸ್. ಮೂರ್ತಿ, ಸಂಚಾಲಕ ಕೆ. ಯಜ್ಞೇಶ್ ಆಚಾರ್, ಸಮಿತಿ ಅಧ್ಯಕ್ಷ ಚಂದ್ರಶೇಖರ ಚೆನ್ನಕಜೆ, ಕಾರ್ಯದರ್ಶಿ ರತ್ನಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಛಾಯಾಗ್ರಾಹಕ ಕೆ.ಎಸ್. ಮೂರ್ತಿ, ಬಾಲಸುಬ್ರಹ್ಮಣ್ಯ ಭಟ್, ನೇರಗದ್ದೆ ಗೋಪಾಲಕೃಷ್ಣ ಭಟ್ರ ಸಂಗ್ರಹದಲ್ಲಿದ್ದ ಹಳೆಕಾಲದ ವಸ್ತುಗಳು ಪ್ರದರ್ಶಿತವಾದವು. ನಂತರ ಸ್ಥಳೀಯ ಬಾಲ ಕಲಾವಿದರಾದ ಪ್ರಣವ್ ಭಕ್ತಿ ಸಂಗೀತ ನೆರವೇರಿತು.
ಪ್ರಸನ್ನಗುಡಿ ಅವರಿಂದ ದಾಸರಪದ: ಆ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದ ಪ್ರಸನ್ನ ಗುಡಿ ಅವರಿಂದ ದಾಸರಪದಗಳ ಹಾಡುಗಾರಿಕೆಯು ಧರ್ಮ ಸಮ್ಮೇಳನ ಮಂಟಪದಲ್ಲಿ ನೆರವೇರಿತು. ಇವರಿಗೆ ಪಕ್ಕವಾದ್ಯದಲ್ಲಿ ರಾಮಚಂದ್ರ ಅರ್ಭಿತ್ತಾಯ ಸಹಕರಿಸಿದ್ದರು.
ಕಲಾವಿದರಿಗೆ ಸಮಿತಿಯ ಪೂರ್ವಾಧ್ಯಕ್ಷ ಗಣೇಶ ಪ್ರಸಾದ್. ಎನ್ ಶಾಲು ಹೊದಿಸಿ ಶ್ರೀದೇವರ ಪ್ರಸಾದ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು. ಸುಬ್ರಹ್ಮಣ್ಯದ ಪ್ರಾಥಮಿಕ ಶಾಲಾ ಪುಟಾಣಿಗಳಿಂದ ಕಲಾ ವೈವಿಧ್ಯ ಜರುಗಿತು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ಭವಾನಿ ಶಂಕರ್, ಮುಖ್ಯಗುರು ಸುಶೀಲಾ ಪಿ.ಜೆ, ಶಿಕ್ಷಕಿಯರಾದ ಮಾಲಿನಿ ಲೋಕೇಶ್, ವಿನೋದ, ವಾಣಿ, ಶಾಂತಿ ಗೌಡ ನೃತ್ಯ ವೈವಿಧ್ಯ ಸಂಯೋಜಿಸಿದ್ದರು. ನೃತ್ಯ ನಿರ್ದೇಶನವನ್ನು ರಾಧಾಕೃಷ್ಣ ದೇವರಗದ್ದೆ ನೆರವೇರಿಸಿದ್ದರು. ಎಸ್.ಎಸ್.ಪಿ.ಯು. ಕಾಲೇಜಿನ ಪ್ರೌಢಶಾಲಾ ವಿಭಾಗದಿಂದ ಶಿಕ್ಷಕ ಗುರುರಾಜ್ ಸಂಯೋಜನೆಯಲ್ಲಿ ಪ್ರತಿಭಾ ಸಿರಿ ಪ್ರದರ್ಶಿತವಾಯಿತು. ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಚನ್ನಕಜೆ ಸ್ಮರಣಿಕೆ ನೀಡಿ ಗೌರವಿಸಿದರು.