ಕಂಕನಾಡಿಗೆ ಹೊಸ ಮಾರುಕಟ್ಟೆ: ಲೋಬೋ
ಮಂಗಳೂರು: ಕಂಕನಾಡಿ ಮಾರುಕಟ್ಟೆಗೆ ಬುಧವಾರ ಭೇಟಿ ನೀಡಿದ ಶಾಸಕ ಜೆ.ಆರ್.ಲೋಬೋ ವ್ಯಾಪಾರಿಗಳ ಸಮಸ್ಯೆ ಬಗ್ಗೆ ಚರ್ಚಿಸಿದರು.
ಸ್ವಚ್ಛತೆ ವ್ಯವಸ್ಥೆ, ಮಾರುಕಟ್ಟೆ ಚಾವಣಿ ದುರಸ್ತಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಮೀನು ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆ ಇದ್ದರೂ ಸರಿಯಾಗಿ ಪಾಲನೆಯಾಗದಿರುವುದು ಶಾಸಕರ ಗಮನಕ್ಕೆ ಬಂತು. ವಿಭಜಿಸುವ ಬಗ್ಗೆ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಹೊಸ ಮಾರುಕಟ್ಟೆ ಪ್ರಾಂಗಣ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗುವುದು. ಮುಂದಿನ 2 ತಿಂಗಳಲ್ಲಿ ನೀಲ ನಕಾಶೆ ಬಿಡುಗಡೆ ಮಾಡುವುದಾಗಿ ಶಾಸಕರು ತಿಳಿಸಿದರು.
ಈ ಸಂದರ್ಭ ಕಾರ್ಪೊರೇಟರ್ ನವೀನ್ ಡಿಸೋಜ ಮತ್ತಿತರರು ಇದ್ದರು.