ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅ.1ರಿಂದ ಕಾಚಿಗುಡ-ಮಂಗಳೂರು ವಿಶೇಷ ಸಾಪ್ತಾಹಿಕ ರೈಲು

Lingaraj Badiger
Updated On : 21 Sept 2013, 12:13 pm

ಮಂಗಳೂರು: ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಕಾಚಿಗುಡ-ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಸಾಪ್ತಾಹಿಕ ರೈಲು ಸಂಚಾರವನ್ನು ನೈಋತ್ಯ ರೇಲ್ವೆ ಫಾಲ್ಘಾಟ್ ವಿಭಾಗ ಆರಂಭಿಸಲಿದೆ.  ಅ.1ರಿಂದ ನ.26ರ ವರೆಗೆ ಪ್ರತಿ ಮಂಗಳವಾರ ಬೆಳಗ್ಗೆ 6ಕ್ಕೆ ಕಾಚಿಗುಡದಿಂದ ಹೊರಟು ಬುಧವಾರ ಬೆಳಗ್ಗೆ 11.20 ಮಂಗಳೂರು ಸೆಂಟ್ರಲ್ ತಲಪುವುದು. ಬುಧವಾರ ರಾತ್ರಿ 8ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಶುಕ್ರವಾರ ನಸುಕಿನ 3.40ಕ್ಕೆ ಕಾಚಿಗುಡ ತಲಪುವುದು ಎಂದು ಪ್ರಕಟಣೆ ತಿಳಿಸಿದೆ.
ನಾಳೆ ಪೂರ್ವಭಾವಿ ಸಭೆ
ಮೂಲ್ಕಿ: ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸುವರ್ಣ ಮಹೋತ್ಸವದ ಆಚರಣೆ ಕುರಿತು ಭಾನುವಾರ ಬೆಳಗ್ಗೆ ಕಾಲೇಜಿನ ಸಭಾಭವನದಲ್ಲಿ ಪೂರ್ವಭಾವಿ ಸಭೆ ಜರಗಲಿದೆ.  ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ.

ಚತುಷ್ಪಥ ಕಾಮಗಾರಿ; ಕಲ್ಲಡ್ಕ ಪೇಟೆ ರಕ್ಷಣೆ ಯತ್ನ-ಡಿಸಿ ಭರವಸೆ
ಬಂಟ್ವಾಳ: ಹಾಸನ-ಬಿ.ಸಿ. ರೋಡ್ ರಾಷ್ಟ್ರೀಯ ಹೆದ್ದಾರಿ ಭಾಗದ ಚತುಷ್ಪಥ ಕಾಮಗಾರಿ ಸಂದರ್ಭ ಕಲ್ಲಡ್ಕ ಪೇಟೆ ಉಳಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ದ.ಕ. ಜಿಲ್ಲಾಧಿಕಾರಿ ಎನ್. ಪ್ರಕಾಶ್ ಭರವಸೆ ನೀಡಿದ್ದಾರೆ.  ರಾಷ್ಟ್ರೀಯ ಹೆದ್ದಾರಿ ಸಂತ್ರಸ್ತರ ಹೋರಾಟ ಸಮಿತಿ ಗೌರವಾಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹಾಗೂ ಅಧ್ಯಕ್ಷ ದಿನೇಶ್ ಶೆಣೈ ನೇತೃತ್ವದಲ್ಲಿ  ಶುಕ್ರವಾರ ನೀಡಲಾದ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ನಡೆಸುವ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳ ಮನವೊಲಿಸುವ ಕಾರ್ಯಮಾಡುವುದಾಗಿ ತಿಳಿಸಿದರು.  ಅಳಲು ತೋಡಿಕೊಂಡ ಕಲ್ಲಡ್ಕ ನಿವಾಸಿಗಳು, ಕಲ್ಲಡ್ಕ ಪರಿಸರವನ್ನು ರಕ್ಷಿಸುವ ಸಲುವಾಗಿ ಬೈಪಾಸ್ ರಸ್ತೆ ನಿರ್ಮಿಸುವಂತೆ ಮನವಿ ಮಾಡಿದರು. ಅಂಡರ್ ಪಾಸ್ ಚತುಷ್ಪಥ ರಸ್ತೆಯ ಅಪಾಯಗಳನ್ನೂ ಜಿಲ್ಲಾಧಿಕಾರಿ ಮುಂದಿಡಲಾಯಿತು.  ಪ್ರಮುಖರಾದ ಪದ್ಮನಾಭ ಕೊಟ್ಟಾರಿ, ಪದ್ಮನಾಭ ರೈ, ಉಂಞ ಅಹಮದ್, ಸ್ಟ್ಯಾನ್ಲಿಸ್ಲಾಸ್ ಡಿಸೋಜ, ಶಿವಾಜಿ ಭಟ್, ಮಹಮ್ಮದ್ ಝಕಾರಿಯಾ, ರಮೇಶ್ ಕಲ್ಲಡ್ಕ, ಲಲಿತಾ ರಾವ್, ಸೂರಜ್, ಡೊನಾಲ್ಡ್ ಡಿಸೋಜ, ತಿರುಮಲೇಶ್ವರ ಭಟ್, ಹುಸೈನ್, ಸುರೇಶ್ ಕಲ್ಲಡ್ಕ, ಅಬ್ಬಾಸ್, ಶಿವರಾಮ್ ಹೊಳ್ಳ, ಸಿ.ವಿ. ಗೋಪಾಲಕೃಷ್ಣ ಭಟ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement