ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದಿನಿಂದ ಸಚಿವ ರಮಾನಾಥ ರೈ ಪ್ರವಾಸ

Lingaraj Badiger
Updated On : 21 Sept 2013, 12:12 pm

ಮಂಗಳೂರು: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ 21ರಿಂದ 23ರವರೆಗೆ ಜಿಲ್ಲೆಯ ವಿವಿಧೆಡೆ ಪ್ರವಾಸ ಕೈಗೊಳ್ಳುವರು. 21ರಂದು ಬೆಳಗ್ಗೆ 9ಕ್ಕೆ ರಾಮಕೃಷ್ಣ ಆಶ್ರಮದಲ್ಲಿ ವಾರ್ಷಿಕೋತ್ಸವದಲ್ಲಿ ಭಾಗಿ, 10.15ಕ್ಕೆ ಅರಳ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಕಾಲನಿ ರಸ್ತೆ ಕಾಮಗಾರಿ ಶಿಲಾನ್ಯಾಸ, 12.30 ಬಿ.ಸಿ.ರೋಡ್‌ನಲ್ಲಿ ಕೃಷಿ ಇಲಾಖೆ ಫಲಾನುಭವಿಗಳಿಗೆ ಪವರ್ ಟಿಲ್ಲರ್ ವಿತರಣೆ. ಮಧ್ಯಾಹ್ನ 2 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಂಡೋಸಲ್ಫಾನ್ ಜಿಲ್ಲಾ ಸಮಿತಿ ಸಭೆ. 22ರಂದು 11ಕ್ಕೆ ಕೆನರಾ ಗರ್ಲ್ಸ್ ಹೈಸ್ಕೂಲ್‌ನ ಸುಧೀಂದ್ರ ಹಾಲ್‌ನಲ್ಲಿ ಭವಿಷ್ಯ ನಿಧಿ ನೌಕರರ ಸಂಘದ ಉದ್ಘಾಟನೆಯಲ್ಲಿ ಭಾಗಿ. ಸಂಜೆ 6ಕ್ಕೆ ಮಾರ್ನಬೈಲುನಲ್ಲಿ ವಾಲಿಬಾಲ್ ಪಂದ್ಯಾಟ ಸಮಾರೋಪ. 23ರಂದು 11ಕ್ಕೆ ಬಂಟ್ವಾಳ ಲ್ಯಾಂಪ್ಸ್ ಸೊಸೈಟಿಯ ವಿಟ್ಲ ಶಾಖೆ ಕಟ್ಟಡ, 11.30 ವಿಟ್ಲ ಸಿಡಿಪಿಒ ಕಚೇರಿ, 12ಕ್ಕೆ ವಿಟ್ಲ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಉದ್ಘಾಟನೆ, 3ಕ್ಕೆ ಸುಬ್ರಹ್ಮಣ್ಯ ಮಹಿಳಾ ಸೊಸೈಟಿಯ ನಿವೃತ್ತ ಕಾರ್ಯದರ್ಶಿ ರಾಜೀವಿ ರೈಗೆ ಸನ್ಮಾನ, ಬಳಿಕ ಸುಳ್ಯದಿಂದ ಕುಶಾಲನಗರಕ್ಕೆ ತೆರಕಳುವರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement