ಕಾಡಾನೆಯಿಂದ ಬತ್ತದ ಕೃಷಿ ನಾಶ
ಉಪ್ಪಿನಂಗಡಿ: ಕಾಡಿನಿಂದಾವೃತವಾದ ಬಲ್ಯ ಪ್ರದೇಶದಲ್ಲಿ ಕಾಡಾನೆ ಹಾವಳಿ ಮತ್ತೆ ಕಾಣಿಸಿಕೊಂಡಿದ್ದು, ಕಾಡಾನೆ ಸಂಚಾರಕ್ಕೆ ಸಿಲುಕಿ ಪೈರು ತುಂಬಿದ ಬತ್ತದ ಕೃಷಿ ಹಾನಿಗೀಡಾಗಿದೆ.
ಬಲ್ಯ ಗ್ರಾಮದ ಕೊಡಂಗೆ, ಗೋಣಿಗುಡ್ಡೆ, ಬೆದ್ರಾಡಿ ಪ್ರದೇಶದಲ್ಲಿ ಕಾಡಾನೆ ಸಂಚರಿಸಿ, ಜಲಜಾಕ್ಷಿ ರೈ, ಸುಂದರ ಗೌಡ, ಧನಂಜಯ ಗೌಡ, ಆನಂದ ರೈಗೆ ಸೇರಿದ ಬತ್ತದ ಗದ್ದೆಗಳು, ಅಡಿಕೆ ಕೃಷಿ ಫಸಲು ಕಾಡಾನೆ ದಾಳಿಗೆ ಸಿಲುಕಿ ಹಾನಿಗೊಂಡಿವೆ.
ಈ ಬಗ್ಗೆ ಕೃಷಿಕರು ಅರಣ್ಯ ಹಾಗೂ ಕಂದಾಯ ಇಲಾಖೆಗೆ ದೂರು ನೀಡಿದ್ದಾರೆ.