ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಜೈಲ್‌ಗೆ ಪೊಲೀಸರ ದಿಢೀರ್ ದಾಳಿ 4 ಮೊಬೈಲ್, ಗಾಂಜಾ, ಚಾರ್ಜರ್ ಪತ್ತೆ

Lingaraj Badiger
Updated On : 21 Sept 2013, 12:13 pm

ಮಂಗಳೂರು: ಜೈಲಿಗೆ ದಿಢೀರ್ ದಾಳಿ ನಡೆಸಿದ ಬರ್ಕೆ ಪೊಲೀಸರು ಕೈದಿಗಳ ಬಳಿ ಇದ್ದ ಗಾಂಜಾ, ಮೊಬೈಲ್, ಚಾರ್ಜರ್ ವಶಕ್ಕೆ ತೆಗೆದುಕೊಂಡಿದ್ದಾರೆ.  
 ಎಸ್‌ಐ ಶರೀಫ್ ನೇತೃತ್ವದಲ್ಲಿ ಪೊಲೀಸರ ತಂಡ ಶುಕ್ರವಾರ ರಾತ್ರಿ 8 ಗಂಟೆ ವೇಳೆಗೆ ದಾಳಿ ನಡೆಸಿತು. ಕೈದಿಗಳ ಕೋಣೆಯನ್ನು ತಪಾಸಣೆ ನಡೆಸುವಾಗ 2 ಪಾಕೆಟ್ ಗಾಂಜಾ, 4 ಮೊಬೈಲ್, 1 ಚಾರ್ಜರ್ ಪತ್ತೆಯಾಯಿತು.
   ಗುರುವಾರ ಜೈಲ್ ಆವರಣದ ಕಸದ ರಾಶಿಯಲ್ಲಿ ಗಾಂಜಾ ಮತ್ತು ನೈಟ್ರೇಟ್ ಗುಳಿಗೆ ಪತ್ತೆಯಾಗಿತ್ತು.
ಡೈವೋರ್ಸ್‌ಗೆ ಮಾವ ಒತ್ತಡ: ಅಳಿಯ ಆತ್ಮಹತ್ಯೆ
ಮಂಗಳೂರು: ವಿವಾಹ ವಿಚ್ಛೇದನ ನೀಡುವಂತೆ ಮಾವ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅಳಿಯ ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 2 ವರ್ಷದ ಹಿಂದೆ ಮಾಲೆಮಾರ್‌ನ ನವೀನ್ ಕುಮಾರ್ (27), ಮಂಗಳ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ದಾಂಪತ್ಯದಲ್ಲಿ ವಿರಸ ಉಂಟಾಗಿತ್ತು. ಮಾವ ನಾರಾಯಣ ಮತ್ತು ದೊಡ್ಡತ್ತೆ ಸುಮಿತ್ರ ಎಂಬವರು ಪದೇ ಪದೇ ಬಂದು, 'ಮಗಳಿಂದ ದೂರವಾಗು ಅವಳಿಗೆ ಡೈವೋರ್ಸ್ ನೀಡು' ಎಂದು ಪೀಡಿಸುತ್ತಿದ್ದರು. ಇದರಿಂದ ನೊಂದು ನವೀನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement