ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಂಗಳೂರು ವಿವಿ ಪದವಿಗೆ ಎನ್‌ಸಿಸಿ ಪಠ್ಯ

Vishwanath S
Updated On : 22 Sept 2013, 12:15 pm

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯು ರಾಜ್ಯದಲ್ಲಿ ಪ್ರಥಮ ಪ್ರಯೋಗವಾಗಿ ಪದವಿ ಶಿಕ್ಷಣದಲ್ಲಿ ಎನ್‌ಸಿಸಿಯನ್ನು ಐಚ್ಚಿಕ ವಿಷಯವಾಗಿ ಅಳವಡಿಸಿಕೊಳ್ಳಲು ತೀರ್ಮಾನಿಸಿದ್ದು, ಪಠ್ಯ ಪುಸ್ತಕ ರಚನೆಗೆ ಸಮಿತಿ ರಚಿಸಿದೆ.
 ಎನ್‌ಸಿಸಿ ಗ್ರೂಪ್ ಹೆಡ್ ಕ್ವಾರ್ಟರ್ಸ್ ಅನುಮತಿ ಮೇರೆಗೆ ಪಠ್ಯಕ್ರಮ ರಚಿಸಲು ತೀರ್ಮಾನಿಸಿದ್ದು, ವಿಷಯಕ್ಕೆ ಸಂಬಂಧಿಸಿದ 7 ಮಂದಿ ತಜ್ಞರು ಆಯ್ಕೆಗೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಡಿಯಲ್ಲಿ ಬರುವ 196 ಪದವಿ ಶಿಕ್ಷಣ ಸಂಸ್ಥೆಗಳು 2014-15ನೇ ಸಾಲಿನಲ್ಲಿ ಬಿಎ, ಬಿಕಾಂ, ಬಿಎಸ್ಸಿ ಹಾಗೂ ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸಿನಲ್ಲಿ ಎನ್‌ಸಿಸಿ ಕೋರ್ಸನ್ನು ಐಚ್ಛಿಕ ವಿಷಯವಾಗಿ ಪ್ರಾರಂಭಿಸಬಹುದು.
 ಎನ್‌ಸಿಸಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ತಮ್ಮ ವಿದ್ಯಾಭ್ಯಾಸದಲ್ಲಿ ಪಠ್ಯವಾಗಿ ಅಳವಡಿಸಿಕೊಂಡು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಇದರಲ್ಲಿ ತರಬೇತಿ ಮತ್ತು ಶಿಕ್ಷಣ ಎರಡನ್ನೂ ಅಳವಡಿಸಿಕೊಳ್ಳಲಾಗುತ್ತದೆ.
 ಎನ್‌ಸಿಸಿ ವಿಷಯದಲ್ಲಿ ಸೈನ್ಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ಧಿ, ಸಂವಹನ ವಿಷಯಗಳನ್ನೊಳಗೊಂಡಿದೆ.
 ಎನ್‌ಸಿಸಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು, ಕೌಶಲ್ಯವನ್ನು ವೃದ್ಧಿಸಲು ಸಹಕಾರಿ. ರಕ್ಷಣಾ ಸಂಸ್ಥೆಗಳಾದ ಸೈನಿಕ, ನೌಕಾದಳ, ಪೊಲೀಸ್ ಇಲಾಖೆಯಲ್ಲಿ ಸೇರಿಕೊಳ್ಳಲು ಸುಲಭವಾಗುತ್ತದೆ. ಅಲ್ಲದೆ ಎನ್‌ಸಿಸಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಬಹುದು.
ಸ್ವಾಯತ್ತ್ತೆಯಲ್ಲಿ ಉಜಿರೆ ಆಯ್ಕೆ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ರಾಷ್ಟ್ರದಲ್ಲಿ 30 ಸ್ವಾಯತ್ತ ಕಾಲೇಜನ್ನು ಆಯ್ಕೆ ಮಾಡಿದ್ದು, ಇದರಲ್ಲಿ ರಾಜ್ಯದ ಉಜಿರೆ ಎಸ್‌ಡಿಎಂ ಕಾಲೇಜ್ ಕೂಡ ಸೇರಿದೆ.
 ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಥಮವಾಗಿ 2013-14ನೇ ಸಾಲಿನಲ್ಲಿ ಎನ್‌ಸಿಸಿಯನ್ನು ಎಸ್‌ಡಿಎಂ ಕಾಲೇಜಿನಲ್ಲಿ ಐಚ್ಛಿಕ ವಿಷಯವಾಗಿ ಸೇರಿಸಿಕೊಳ್ಳಲಾಗಿದೆ. ಈಗಾಗಲೇ ಒಟ್ಟು 11 ವಿದ್ಯಾರ್ಥಿಗಳು ಬಿಎ, ಬಿಕಾಂ, ಬಿಎಸ್ಸಿನಲ್ಲಿ ಎನ್‌ಸಿಸಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವಾರದಲ್ಲಿ 3 ಗಂಟೆ ಪ್ರಾಕ್ಟಿಕಲ್ ತರಗತಿ ಹಾಗೂ 3 ಗಂಟೆ ಪಾಠ ಇರುತ್ತದೆ.
ಶೈಕ್ಷಣಿಕ ಪ್ರಥಮ ವರ್ಷದಲ್ಲಿ ಎನ್‌ಸಿಸಿಯಲ್ಲಿ ಒಟ್ಟು 18 ಯುನಿಟ್‌ಗಳಿದ್ದು, ಪ್ರಥಮ ಸೆಮಿಷ್ಟರ್‌ನಲ್ಲಿ 9 ಯುನಿಟ್‌ಗಳಿರುತ್ತದೆ. ಒಂದು ಸೆಮಿಸ್ಟರ್‌ಗೆ ಒಟ್ಟು 10 ಪ್ರಾಕ್ಟಿಕಲ್ ತರಗತಿಗಳಿರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement