ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೆಲಸದ ಭದ್ರತೆ ಕಳಕೊಂಡ ಭದ್ರತಾ ಸಿಬ್ಬಂದಿ ಗೋಳು

Mainashree
Updated On : 23 Sept 2013, 10:46 am

ಸುಬ್ರಹ್ಮಣ್ಯ ವೆಲಂಕಣಿ ಸಭಾಂಗಣದಲ್ಲಿ ಇತ್ತೀಚೆಗೆ ಸುದ್ದಿಗಾರರೆದುರು ಅಳಲು ತೋಡಿಕೊಂಡ ಕಾರ್ಮಿಕರಾದ ಧರ್ಮಾವತಿ ಗಣೇಶ್ ದೇವರಗದ್ದೆ, ಕುಕ್ಕೆ ಸುಬ್ರಹ್ಮಣ್ಯ ದೇವಳದ ಭದ್ರತಾ ಸಿಬ್ಬಂದಿಯಾಗಿ ಕಳೆದ 6- 7 ವರ್ಷಗಳಿಂದ ಕಾರ್ಯನಿರ್ವಹಿಸಿದ ತಮಗೆ ಇದೀಗ ಏಕಾಏಕಿಯಾಗಿ ನಾಳೆಯಿಂದ ನೀವು ಕೆಲಸಕ್ಕೆ ಬರುವುದು ಬೇಡವೆಂದು ತಿಳಿಸಿದಾಗ ನಾವು ದಿಗ್ಭ್ರಮೆಗೊಳಗಾದೆವು. ಏಕೆಂದು ಕೇಳಿದಾಗ ಟೆಂಡರ್‌ನಲ್ಲಿ ಗುತ್ತಿಗೆಯನ್ನು ನಾವು ಪಡೆದುಕೊಂಡಿದ್ದೇವೆ ಎಂದು ತಿಳಿಸಿದಾಗ ನಮಗೆ ಕೆಲಸ ಕೊಡಿ, ನಮ್ಮ ಸಂಸಾರ ನಿರ್ವಹಣೆಗೆ ಕೆಲಸ ಅನಿವಾರ್ಯ ಎಂದು ಹೇಳಿದಾಗ ನಮ್ಮ ಮಾತನ್ನು ನಿರಾಕರಿಸಿದರು. ನಮಗೆ ಕೆಲಸ ಕೊಡಬೇಕು ಎಂದು ದೇವಳದ ಆಡಳಿತ ಮಂಡಳಿಯನ್ನು ಕೂಡ ಮನವಿ ಮಾಡಿದ್ದೇವೆ. ಇದೀಗ ಕೆಲಸ ಕಳಕೊಂಡ ನಮ್ಮ ಬದುಕು ಅತಂತ್ರವಾಗಿದೆ ಎಂದು ಹೇಳಿದರು.
ದೂರು ಸಲ್ಲಿಕೆ: ತಾ.ಪಂ. ಸದಸ್ಯೆ ವಿಮಲಾ ರಂಗಯ್ಯ ಮಾತನಾಡಿ, ಗುತ್ತಿಗೆದಾರರು ಬಡ ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ ಹಾಗೂ ಕಾರ್ಮಿಕ ಕಾಯ್ದೆಯ ಪ್ರಕಾರ ಯಾವುದೇ ಸವಲತ್ತನ್ನು ನೀಡದೆ ವಂಚಿಸಿರುವುದು ಜನಪ್ರತಿನಿಧಿಯಾದ ತನ್ನ ಗಮನಕ್ಕೆ ಬಂದಿದೆ. ಗುತ್ತಿದಾರರ ಮೇಲೆ ಕಾನೂನು ಕ್ರಮಕೈಗೂಳ್ಳುವಂತೆ ಉಸ್ತುವಾರಿ ಸಚಿವರಿಗೆ ಹಾಗೂ ಇಲಾಖಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.  ಸುಮಾರು 30 ಮಂದಿ ನೊಂದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement