ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಗುತ್ತಿಗೆ ಭದ್ರತಾ ಸಿಬ್ಬಂದಿ ಬದುಕು ಅತಂತ್ರ

Mainashree
Updated On : 23 Sept 2013, 10:46 am

ಸುಬ್ರಹ್ಮಣ್ಯ: ಕಳೆದ 6- 7 ವರ್ಷಗಳಿಂದ ಭದ್ರತಾ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 25 ಮಂದಿ ಕಾರ್ಮಿಕರಿಗೆ ಗುತ್ತಿಗೆದಾರ ಇದೀಗ ಕೆಲಸ ನಿರಾಕರಿಸಿದ್ದು, ಈ ಕಾರ್ಮಿಕರು ಕೆಲಸ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ.
ಕ್ಷೇತ್ರಕ್ಕೆ ದಿನಂಪ್ರತಿ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಅಮೂಲ್ಯ ಸಂಪತ್ತು ಹೊಂದಿದ ದೇವಾಲಯಕ್ಕೆ ಭದ್ರತೆ ಒದಗಿಸಲೆಂದು ಕಳೆದ 6 ವರ್ಷಗಳ ಹಿಂದೆ ದೇವಳದ ವತಿಯಿಂದ ಟೆಂಡರ್ ಕರೆದು ಸಿಬ್ಬಂದಿ ನೇಮಕಕ್ಕೆ ಗುತ್ತಿಗೆ ನೀಡಲಾಗಿತ್ತು. ಈ ನೇಮಕದ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು ಭದ್ರತಾ ಸಿಬ್ಬಂದಿ ನೇಮಿಸಿ, ಅವರಿಗೆ ಕಾನೂನು ಬದ್ಧ ಸವಲತ್ತುಗಳನ್ನು ನೀಡದೆ ವಂಚಿಸಿದೆ ಎಂಬ ಆರೋಪ ಕೇಳಿಬಂದಿದೆ.
ಕಾರ್ಮಿಕರ ದೂರು: ಕನಿಷ್ಠ ವೇತನ, ಕೆಲಸದ ಭದ್ರತೆ ನೀಡದೆ ಗುರುತಿನ ಚೀಟಿ, ಪ್ರಾವಿಡೆಂಟ್ ಫಂಡ್ ಚೀಟಿ, ಇಎಸ್‌ಐ ಸೌಲಭ್ಯ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ಸೇರಿದಂತೆ ಹಲವಾರು ಕಾನೂನು ಬದ್ಧ ಸವಲತ್ತುಗಳನ್ನು ಈ ಕಾರ್ಮಿಕರಿಗೆ ನಿರಾಕರಿಸಿರುವುದಾಗಿ ಕೆಲಸ ಕಳಕೊಂಡ ಕಾರ್ಮಿಕರು ದೂರಿದ್ದಾರೆ.
ಹಿಂದಿನ ವರ್ಷ ಗುತ್ತಿಗೆಗೆ ನೇಮಕ ಪಡಕೊಂಡಿದ್ದ ಸಂಸ್ಥೆಯ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದು, ನೂತನವಾಗಿ ಗುತ್ತಿಗೆ ವಹಿಸಿಕೊಂಡ ಸ್ಥಳೀಯ ಗುತ್ತಿಗೆದಾರರು ಈ ಹಿಂದೆ ದುಡಿದ 26 ಮಂದಿಗೆ ಕಾರಣವಿಲ್ಲದೆ ಕೆಲಸ ನಿರಾಕರಿಸಿರುತ್ತಾರೆ.
ಮುಂದುವರಿಸಲು ಮನವಿ: ಕೆಲಸ ನಿರಾಕರಣೆಗೆ ಒಳಗಾದ ಕಾರ್ಮಿಕರು ಇದೇ ಕೆಲಸದಲ್ಲಿ ತಮ್ಮನ್ನು ಮುಂದುವರಿಸುವಂತೆ ದೇವಳದ ಕಾರ್ಯನಿರ್ವಹಣಾಧಿಕಾರಿ, ಆಡಳಿತ ಮಂಡಳಿಗೆ ಮನವಿ ನೀಡಿ ಒತ್ತಾಯಿಸಿದ್ದು, ಮಾನವೀಯ ನೆಲೆಯಲ್ಲೂ ಕೆಲಸ ನೀಡುವಂತೆ ಬೇಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement