ದಾರಿ ತಪ್ಪುವ ಯುವಜನತೆಯ ತಿದ್ದಿ: ಸಚಿವ ರೈ
ಮಂಗಳೂರು: 'ಇಂದು ಯುವ ಜನತೆ ದಾರಿ ತಪ್ಪುತ್ತಿದ್ದು, ಅವರನ್ನು ತಿದ್ದಿ ತೀಡುವ ಕೆಲಸ ನಮ್ಮೆಲ್ಲರ ಜವಾಬ್ದಾರಿ' ಎಂದು ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಶ್ರೀ ರಾಮಕೃಷ್ಣ ಮಠದಲ್ಲಿ ಶನಿವಾರ ನಡೆದ ವಿವೇಕ ಸಂಸ್ಮರಣ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಸಚಿವ ಯು.ಟಿ. ಖಾದರ್ ಮಾತನಾಡಿ, ಸುಭದ್ರ ರಾಷ್ಟ್ರ ಕಟ್ಟಲು ಯುವ ಪೀಳಿಗೆ ಪಣ ತೊಡಬೇಕು. ದೇಶದಲ್ಲಿ ಕಲಿತು ವಿದೇಶದಲ್ಲಿ ಹೋಗಿ ದುಡಿಯುವ ಮನೋಭಾವ ಕಡಿಮೆಯಾಗಬೇಕು. ದೇಶದ ಬಗ್ಗೆ ಬಾಯಿ ಮಾತಿನಲ್ಲಿ ಅಭಿಮಾನವಿರದೆ, ದೃಢ ಮನಸ್ಸಿನ ಬದ್ಧತೆ ಇರಬೇಕು ಎಂದರು.
ನಿಟ್ಟೆ ವಿಶ್ವವಿದ್ಯಾಲಯ ಕುಲಪತಿ ಡಾ.ಎನ್. ವಿನಯ ಹೆಗ್ಡೆ ಮಾತನಾಡಿದರು. ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದಜಿ ಸ್ವಾಮೀಜಿ ದಿಕ್ಸೂಚಿ ಭಾಷಣ ಮಾಡಿದರು.
ಚೆನ್ನೈ ರಾಮಕೃಷ್ಣ ಮಠದ ಶ್ರೀ ಆತ್ಮಶ್ರದ್ಧಾನಂದಜಿ ಸ್ವಾಮೀಜಿ, ಬಿಜಾಪುರ-ಗದಗ್ ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಬೆಂಗಳೂರು ಹ್ಯುಮನ್ ನೆಟ್‌ವರ್ಕಿಂಗ್ ಅಕಾಡೆಮಿ ಅಧ್ಯಕ್ಷ ಪ್ರೊ. ರಘೋತ್ತಮ್ ರಾವ್ ಇದ್ದರು.