ಸಾರಿಗೆ ಸಂಸ್ಥೆಯಿಂದ ಪುತ್ತೂರಲ್ಲಿ ಸಿಟಿ ಬಸ್ ವ್ಯವಸ್ಥೆ
ಪುತ್ತೂರು: ಪಟ್ಟಣ ಮತ್ತು ಆಸುಪಾಸಿನ ಪ್ರದೇಶಗಳ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಎಸ್ಆರ್ಟಿಸಿ ಪುತ್ತೂರು ಘಟಕದ ವತಿಯಿಂದ ಸಂಪರ್ಕ ಸಾರಿಗೆ ಸಿಟಿ ಬಸ್ ವ್ಯವಸ್ಥ್ಥೆಯನು ಆರಂಭಿಸಿದೆ.
ಘಟಕದ ಮಹತ್ವದ ಯೋಜನೆಯಾದ ಈ ಸಿಟಿ ಬಸ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರವನು ಕೇಂದ್ರವಾಗಿರಿಸಿ ಕಬಕದಿಂದ ಕುಂಬ್ರ, ಪುತ್ತೂರಿನಿಂದ ಬೇರಿಕೆ ಮತ್ತು ಸವಣೂರು ಮಾರ್ಗದಲ್ಲಿ ಬಸ್ಸು ವ್ಯವಸ್ಥೆಯನು ಆರಂಭಿಸಲಾಗಿದೆ.ಪ್ರಾಯೋಗಿಕವಾಗಿ ಆರಂಭಿಸಲಾದ ಸಂಪರ್ಕ ಸಾರಿಗೆ ಬಸ್ ಕಬಕ- ಕುಂಬ್ರ ನಡುವೆ 16 ಟ್ರಿಪ್, ಪುತ್ತೂರು- ಬೇರಿಕೆ ನಡುವೆ 13 ಟ್ರಿಪ್ ಮತ್ತು ಪುತ್ತೂರು ಸವಣೂರು ನಡುವೆ 8 ಟ್ರಿಪ್ ಓಡಾಟ ನಡೆಸುತ್ತಿದೆ.
ಸವಣೂರಿನಲ್ಲಿ ಸ್ವಾಗತ: ನೂತನ ಬಸ್ ಸಂಚಾರಕ್ಕೆ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಚಾಲನೆ ನೀಡಿದರು.
ತಾ.ಪಂ. ಸದಸ್ಯ ದಿನೇಶ್ ಮಾದು, ಸವಣೂರು ಗ್ರಾ.ಪಂ.ಸದಸ್ಯರಾದ ರಾಕೇಶ್ ರೈ ಕೆಡೆಂಜಿ, ಗಿರಿಶಂಕರ್ ಕುಲಾಯ, ಸವಣೂರು ಸಿ.ಎ. ಬ್ಯಾಂಕ್ ನಿರ್ದೇಶಕ ಕರುಣಾಕರ ಪೂಜಾರಿ ಪಟ್ಟೆ , ಸವಣೂರು ಮಸೀದಿಯ ಅಧ್ಯಕ್ಷ ಪುತ್ತಬಾವು, ಶಾರದಾಂಬ ಸೇವಾ ಸಂಘದ ಅಧ್ಯಕ್ಷ ಮೋಹನ್ ರೈ ಕೆರೆಕ್ಕೋಡಿ ,ರೈತ ಸಂಘದ ಸವಣೂರು ವಲಯಾಧ್ಯಕ್ಷ ಡಿ.ಎಲ್. ಗಾಂಭೀರ, ಸವಣೂರು ಯುವಕ ಮಂಡಲದ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಸಚಿನ್, ಸುಪ್ರಿತ್ ರೈ ಖಂಡಿಗೆ, ಸುರೇಶ್ ರೈ ಸೂಡಿಮುಳ್ಳು, ಸತೀಶ್ ಬಲ್ಯಾಯ, ರಾಮಕೃಷ್ಣ ಪ್ರಭು, ಸುಹಾಸ್ ಕಾರಂತ್, ಸಂಪತ್ ಜೈನ್, ಎಂ.ಎ. ರಫೀಕ್ ಇದ್ದರು.
ಕುಂಬ್ರದಲ್ಲಿ ಸ್ವಾಗತ: ನೂತನವಾಗಿ ಪ್ರಾರಂಭಗೊಂಡ ಸಂಪರ್ಕ ಸಾರಿಗೆ ಬಸ್ಸನು ಕುಂಬ್ರದಲ್ಲಿ ನಾಗರಿಕರ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸ್ವಾಗತಿಸಲಾಯಿತು. ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಸತೀಶ್, ಡಿಪೋ ಮೆನೇಜರ್ ಪ್ರಶಾಂತ್, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಕೆ. ದಿವಾಕರ ಶೆಟ್ಟಿ, ಕಾರ್ಯದರ್ಶಿ ಹನೀಫ್, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ನಿತೀಶ್ ಕುಮಾರ್, ಪುತ್ತೂರು ಎಪಿಎಂಸಿ ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ, ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಾಸು ಪೂಜಾರಿ ಇದ್ದರು.