ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅ.5ರಿಂದ ಮಂಗಳೂರು ದಸರಾ

Rashmi Kasaragodu
Updated On : 24 Sept 2013, 11:51 am

ಮಂಗಳೂರು: ಕುದ್ರೋಳಿ ಗೋಕರ್ಣನಾಥೇಶ್ವರ ದೇಗುಲದಲ್ಲಿ ಅ.5ರಿಂದ 14ರವರೆಗೆ ದಸರಾ ಆಚರಿಸಲಾಗುವುದು.
 ಈ ಬಾರಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ದಸರಾ ಉದ್ಘಾಟಿಸುವರು. ಎಂದಿನಂತೆ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ದಸರಾ ಮೆರವಣಿಗೆ ನೇತೃತ್ವ ವಹಿಸುವರು ಎಂದು ದೇಗುಲ ಅಭಿವೃದ್ಧಿ ಸಮಿತಿಯ ಹರಿಕೃಷ್ಣ ಬಂಟ್ವಾಳ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
 ಅ.5ರಂದು ಬೆಳಗ್ಗೆ 11.30ಕ್ಕೆ ಶ್ರೀಗೋಕರ್ಣನಾಥ ಕಲ್ಯಾಣಮಂಟಪದಲ್ಲಿ ಶಾರದಾ ಮಾತೆ ಮತ್ತು ನವದುರ್ಗೆಯರು ಸೇರಿದಂತೆ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅ.10ರಂದು ದಸರಾ ಮತ್ತು 101ನೇ ವಾರ್ಷಿಕೋತ್ಸವನ್ನು ಡಾ.ಹೆಗ್ಗಡೆ ಉದ್ಘಾಟಿಸುವರು.
 ಸಂತೋಷಿ ಕಲಾಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ  ಆಯೋಜಿಸಲಾಗಿದೆ. ಪ್ರತಿದಿನ ಸಂಜೆ ರಾಷ್ಟ್ರಮಟ್ಟದ ಕಲಾವಿದರು ಕಾರ್ಯಕ್ರಮ ನೀಡುವರು. ಅ.14ರಂದು ಸಂಜೆ 4 ಗಂಟೆಗೆ ಕ್ಷೇತ್ರದಿಂದ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಮೆರವಣಿಗೆ ಹೊರಟು, ನಗರದ 9ಕಿ.ಮೀ. ರಾಜರಸ್ತೆಯಲ್ಲಿ ಮೆರವಣಿಗೆ ಸಾಗಲಿದೆ. ನಗರದಲ್ಲಿ ವಿಶೇಷವಾಗಿ ವಿದ್ಯುದೀಪಗಳಿಂದ ಅಲಂಕರಿಸಲಾಗುವುದು ಎಂದು ಅವರು ತಿಳಿಸಿದರು. ಮೆರವಣಿಗೆಯಲ್ಲಿ ನೂರಾರು ಸ್ತಬ್ಧಚಿತ್ರಗಳು ಭಾಗವಹಿಸಲಿದೆ.
ಅಪಪ್ರಚಾರ ಅಂತ್ಯ: ಮೊತ್ತಮೊದಲ ಬಾರಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆ ಆಗಮಿಸುತ್ತಿದ್ದಾರೆ. ಹಿಂದೆ ಅವರ ಸಹೋದರ ಹರ್ಷೇಂದ್ರ ಹೆಗ್ಗಡೆ ಕ್ಷೇತ್ರಕ್ಕೆ ಬಂದಿದ್ದರು. ದಸರಾಕ್ಕೆ ಧರ್ಮಸ್ಥಳ ಕ್ಷೇತ್ರ ವತಿಯಿಂದ ಟ್ಯಾಬ್ಲೊ ಕಳುಹಿಸುತ್ತಿದ್ದರು. ಕುದ್ರೋಳಿ ಕ್ಷೇತ್ರದ ಮುಂದಾಳು ಜನಾರ್ದನ ಪೂಜಾರಿ ಮತ್ತು ಡಾ.ಡಿ.ವೀರೇಂದ್ರ ಹೆಗ್ಗಡೆ ನಡುವೆ ಮನಸ್ತಾಪ ಇದೆ ಎಂದು ಹರಡಿದ ಅಪಪ್ರಚಾರ ಹೆಗ್ಗಡೆ ಆಗಮನದಿಂದ ಅಂತ್ಯವಾಗಲಿದೆ ಎಂದು ಹರಿಕೃಷ್ಣ ಬಂಟ್ವಾಳ್ ನುಡಿದರು. ಕುದ್ರೋಳಿ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ರಾಘವೇಂದ್ರ ಕೂಳೂರು, ಪದ್ಮರಾಜ್ ಆರ್. ಬಿ.ಕೆ.ತಾರಾನಾಥ್, ಡಾ.ಬಿ.ಜಿ. ಸುವರ್ಣ ಡಾ.ಅನಸೂಯ ಇದ್ದರು.
 



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement