ಕಾಂತಾವರ: '29ರಂದು ತಿಂಗಳ ಸಾಹಿತ್ಯ ಸಂಸ್ಕೃತಿ ಸಂವರ್ಧನ'
ಕಾಂತಾವರ: ಇಲ್ಲಿನ ಅಲ್ಲಮಪ್ರಭು ಪೀಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚೌಟ ಪ್ರತಿಷ್ಠಾನದ ವತಿಯಿಂದ ಕಾಂತಾವರ ರಥಬೀದಿಯಲ್ಲಿರುವ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡಭವನದ ಪಂಪ ಮಹಾಕವಿ ಸಭಾಭವನದಲ್ಲಿ 29ರಂದು ಅಪರಾಹ್ನ 3ಕ್ಕೆ ತಿಂಗಳ ಸಾಹಿತ್ಯ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ 'ಸ್ವಾಮಿ ವಿವೇಕಾನಂದರ ಶೈಕ್ಷಣಿಕ ಚಿಂತನೆಗಳು' ಕುರಿತು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಮಾತನಾಡಲಿದ್ದಾರೆ ಎಂದು ಪ್ರತಿಷ್ಠಾನ ಪ್ರಕಟಣೆ ತಿಳಿಸಿದೆ.
ಈಶಾನ್ಯ ರಾಜ್ಯ ಕಲಾವಿದರ
ಸಾಂಸ್ಕೃತಿಕ ಕಾರ್ಯಕ್ರಮ
ಮಂಗಳೂರು: ಯೇನೆಪೋಯ ವಿಶ್ವ ವಿದ್ಯಾಲಯದಲ್ಲಿ ಸೆ.25ರಂದು ತಂಜಾವೂರು ದಕ್ಷಿಣ ಪ್ರಾಂತ ಸಾಂಸ್ಕೃತಿಕ ಕೇಂದ್ರ ಕಲಾವಿದರು ಆಕ್ಟೇವ್ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ. ಈಶಾನ್ಯ ರಾಜ್ಯಗಳ 150 ಜಾನಪದ ಕಲಾವಿದರ ತಂಡ ಭಾಗವಹಿಸಲಿದೆ ಎಂದು ಯೇನೆಪೋಯ ವಿವಿ ಕುಲಸಚಿವ ಸಿ. ರಘುವೀರ್ ಹೇಳಿದರು. ರಾಜ್ಯ ಮೀನುಗಾರಿಕೆ, ಯುವಜನಸೇವೆ ಹಾಗೂ ಕ್ರೀಡಾ ಸಚಿವ ಆಭಯಚಂದ್ರ ಜೈನ್ ಉದ್ಘಾಟಿಸುವರು. ಸಂಸದ ನಳಿನ್ಕುಮಾರ್ ಕಟೀಲ್, ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಭಾಗವಹಿಸುವರು. ಸುದ್ದಿಗೋಷ್ಠಿಯಲ್ಲಿ ಪ್ರೊ. ಕುಂಞ, ಪ್ರೊ.ಜಯರಾಜ್ ಇದ್ದರು.