ನಮೋ ಬ್ರಿಗೇಡ್ ವ್ಯಕ್ತಿ ಪೂಜೆ ಮಾಡುತ್ತಿಲ್ಲ: ವಂಶಿ
ವಿಟ್ಲ: ನಮೋ ಬ್ರಿಗೇಡ್ ಮೋದಿಯ ಅವರ ಶಕ್ತಿ, ಜೊತೆಗೆ ಅವರ ತ್ಯಾಗದ ಪೂಜೆ ಮಾಡುತ್ತಿದೆಯೇ ಹೊರತು ವ್ಯಕ್ತಿ ಪೂಜೆ ಮಾಡುತ್ತಿಲ್ಲ. ಗುಜರಾತ್ನಲ್ಲಿ ಮೋದಿಯನ್ನು ಕೋಮುಗಲಭೆ ಮಾಡಿದ ವ್ಯಕ್ತಿಯೆಂದು ಕಾಂಗ್ರೆಸ್ನವರು ಅಶ್ಲೀಲವಾದ ರೀತಿಯಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಂಡ್ಯ ಜಿಲ್ಲೆಯ ಯುವಭಾರತ ಪ್ರಭಾರಿ ನಿತ್ಯಾನಂದ ವಿವೇಕ ವಂಶಿ ತಿಳಿಸಿದರು. ಭಾನುವಾರ ವಿಟ್ಲದ ಹನುಮಗಿರಿಯ ಶ್ರೀರಾಮ ಮಂದಿರದಲ್ಲಿ ವಿಟ್ಲ ನಮೋ ಬ್ರಿಗೇಡ್ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿ. ರಾಮದಾಸ ಶೆಣೈ ಸ್ವಾಗತಿಸಿದರು. ಪ್ರೇಮಾನಂದ ಕಾಮತ್ ವಂದೇ ಮಾತರಂ ಹಾಡಿದರು.
ಬೈಕ್ ರ್ಯಾಲಿ: ಸಂಜೆ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ವಿಟ್ಲ ನಮೋ ಬ್ರಿಗೇಡ್ ವತಿಯಿಂದ ಬೈಕ್ ರ್ಯಾಲಿಯನ್ನು ಏರ್ಪಡಿಸಿತ್ತು. ಎಂ. ನಿತ್ಯಾನಂದ ನಾಯಕ್ ಈ ರ್ಯಾಲಿಯನ್ನು ಉದ್ಘಾಟಿಸಿದರು. ಬಳಿಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಬೈಕ್ ರ್ಯಾಲಿ ಹನುಮಗಿರಿಯ ಶ್ರೀರಾಮ ಮಂದಿರಕ್ಕೆ ತಲುಪಿತು. ಮುಖಂಡರಾದ ಹರೀಶ್ ವಿಟ್ಲ, ಎಂ. ಹರೀಶ್ ನಾಯಕ್, ನವೀನ್ ಭಟ್, ಅರುಣ ವಿಟ್ಲ, ಉಮೇಶ್ ಕಾಶಿಮಠ, ಸುರೇಶ್, ಗಣೇಶ್, ವಿಶ್ವನಾಥ ಗೌಡ ನಾಯ್ತೊಟ್ಟು, ನಿರಂಜನ್ ಗೌಡ ಮಾಡತ್ತಾರು, ಕಾರ್ತಿಕ್ ಕುಳಾಯಿ, ರಘುಪತಿ ಪೈ, ಜಗದೀಶ್ ಪುಣಚ, ಶ್ರೀಕೃಷ್ಣ ವಿಟ್ಲ, ಆದಿತ್ಯ, ಸುರೇಶ್ ವಿ., ರಾಮದಾಸ್ ಕಂಬಳಬೆಟ್ಟು, ದಯಾನಂದ ಶೆಟ್ಟಿ ಉಜ್ರೆಮಾರ್, ಮೋಹಿತ್ ಇದ್ದರು.