ಮೂಲ್ಕಿ: ಬೈಕ್ ಡಿಕ್ಕಿ- ವಿದ್ಯಾರ್ಥಿನಿಗೆ ಗಾಯ
ಮೂಲ್ಕಿ: ಮೂಲ್ಕಿಯ ಪೋಲಿಸ್ ಠಾಣಾ ವ್ಯಾಪ್ತಿಯ ಮೂಲ್ಕಿ ಸಮೀಪದ ಕವತ್ತಾರು ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕವತ್ತಾರು ಶಾಲೆಯ ವಿದ್ಯಾರ್ಥಿನಿ ಸ್ವಾತಿ(11) ಎಂಬವಳಿಗೆ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ ಆಕೆ ತೀವ್ರ ಗಾಯಗೊಂಡಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಬೈಕ್ ಸವಾರನ ಅಜಾಗರೂಕತೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
30ರಂದು ಪ್ರತಿಭಟನೆ
ಮಂಗಳೂರು: ಪಡೀಲು- ಬಜಾಲ್ ರಸ್ತೆ ರೈಲ್ವೆ ಕ್ರಾಸಿಂಗ್ ಕೆಳಸೇತುವೆ ನಿರ್ಮಾಣ ಕಾಮಗಾರಿ ಕೂಡಲೇ ಪ್ರಾರಂಭಿಸುವಂತೆ ಒತ್ತಾಯಿಸಿ ಬಜಾಲ್ ಪಕಲಡ್ಕ ಡಿವೈಎಫ್ ಘಟಕ ಸೆ. 30 ರಂದು ಬೆಳಗ್ಗೆ 10ಕ್ಕೆ ಪಡೀಲ್ ರೈಲ್ವೆ ಗೇಟ್ ಬಳಿ ಪ್ರತಿಭಟನೆ ನಡೆಸಲಿದೆ. ಪಡೀಲ್ ಬಜಾಲ್ ರಸ್ತೆಯಲ್ಲಿ ರೈಲ್ವೆ ಕ್ರಾಸಿಂಗ್ಗೆ ಕೆಳಸೇತುವೆ ನಿರ್ಮಾಣ ಆಗಬೇಕೆಂಬುವುದು ಜನರ ಬಹುದಿನದ ಕನಸು. ಹತ್ತಾರು ರೈಲುಗಳು ದಿನದಲ್ಲಿ ಓಡಾಡುವುದರಿಂದ ಹೆಚ್ಚಿನ ಅವಧಿಗಳಲ್ಲಿ ರೈಲ್ವೆ ಗೇಟ್ ಮುಚ್ಚಿರುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಡಿವೈಎಫ್ಐ ಮತ್ತು ಸ್ಥಳೀಯ ಸಹಕಾರಿ ಸಂಘಗಳು ಆಶ್ರಯದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಗುತ್ತದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ತಿಳಿಸಿದೆ