ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸೌತಡ್ಕ: ಹರಕೆ ಪೂಜೆ ಸಲ್ಲಿಸಿದ ಶಾಸಕ ವಸಂತ ಬಂಗೇರ

Rashmi Kasaragodu
Updated On : 24 Sept 2013, 11:49 am

ಉಪ್ಪಿನಂಗಡಿ: ವಿಜಯ ಪ್ರಾಪ್ತಿಗಾಗಿ ಕಾಂಗ್ರೆಸ್ ಕಾರ್ಯಕರ್ತರು ಹೇಳಿಕೊಂಡಿದ್ದ ರಂಗಪೂಜೆ ಹರಕೆಯನ್ನು ಬೆಳ್ತಂಗಡಿ ಶಾಸಕ ವಸಂತ ಬಂಗೇರ ಸೌತಡ್ಕಕ್ಕೆ ಆಗಮಿಸಿ ನೆರವೇರಿಸಿದರು.
ಕೊಕ್ಕಡ ವಲಯ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ಕೊಲ್ಲಾಜೆ ಮತ್ತು ಅರಂತ ಬೈಲು ಪ್ರಶಾಂತ ರೈ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಸಂತ ಬಂಗೇರ ಅವರಿಗೆ ವಿಜಯ ಪ್ರಾಪ್ತಿಯಾದರೆ ಸೌತಡ್ಕ ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆ ಹರಕೆ ಹೇಳಿಕೊಂಡಿದ್ದು, ಆ ನಿಮಿತ್ತ ಶನಿವಾರ ಶ್ರೀ ಕ್ಷೇತ್ರದಲ್ಲಿ ಹರಕೆ ಸಲ್ಲಿಸಲಾಯಿತು.
ಶಾಸಕ ವಸಂತ ಬಂಗೇರ ಮತ್ತು ಪತ್ನಿ ಸುಜಿತಾ ಬಂಗೇರ ಪೂಜೆಯ ವೇಳೆ ಉಪಸ್ಥಿತರಿದ್ದು, ಕಾರ್ಯಕರ್ತರ ಭಾವನೆಗೆ ಸ್ಪಂದಿಸಿದರು. ಆಲಂಕಾರು ದುರ್ಗಾಂಬಾ ಕಾಲೇಜಿನ ಪ್ರಾಂಶುಪಾಲ ಕೆ. ವಿಠಲ ರೈ, ಶಾಸಕರ ಕಾರ್ಯದರ್ಶಿ ಪ್ರಶಾಂತ್, ಪುತ್ತೂರು ಅಶ್ವಿನಿ ಹೊಟೇಲ್ ಮಾಲೀಕ ಕರುಣಾಕರ ರೈ, ವಸಂತ ಪುದುವೆಟ್ಟು, ಶ್ರೀ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ವಾಸುದೇವ ಶಬರಾಯ, ಬೆಳ್ತಂಗಡಿ ಗ್ರೇಸಿಯನ್ ವೇಗಸ್ ಇದ್ದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement