ಅ.4ರಿಂದ ವಿಟ್ಲದಲ್ಲಿ ರಾಜ್ಯಮಟ್ಟದ ಕಬಡ್ಡಿ
ವಿಟ್ಲ: ರಾಜ್ಯಮಟ್ಟದ ಸಬ್ ಜೂನಿಯರ್ ಕಬಡ್ಡಿ ಪಂದ್ಯಾಟ ಅಕ್ಟೋಬರ್ 4, 5ರಂದು ವಿಟ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯಾವಳಿಯ ಸ್ವಾಗತ ಸಮಿತಿ ಅಧ್ಯಕ್ಷರಾಗಿ ರಮಾನಾಥ ವಿಟ್ಲ ಆಯ್ಕೆಯಾಗಿದ್ದಾರೆ.
ಇಲ್ಲಿನ ಶಾಲೆಯಲ್ಲಿ ವಿಟ್ಲ ಗ್ರಾ.ಪಂ ಅಧ್ಯಕ್ಷೆ ಭವಾನಿ ರೈ ಕೊಲ್ಯ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಗೌರವಾಧ್ಯಕ್ಷರಾಗಿ ಪುತ್ತೂರು ಶಾಸಕಿ ಟಿ ಶಕುಂತಳಾ ಶೆಟ್ಟಿ, ಗೌರವ ಸಲಹೆಗಾರರಾಗಿ ಎಂ.ಎಸ್. ಮಹಮ್ಮದ್, ಕೆ.ಟಿ. ಶೈಲಜಾ ಭಟ್, ಭವಾನಿ ರೈ ಕೊಲ್ಯ ಹಾಗೂ ಪ್ರವೀಣ್‌ಚಂದ್ರ ಆಳ್ವ ಅವರನ್ನು ಆರಿಸಲಾಯಿತು.
ಉಪಾಧ್ಯಕ್ಷರಾಗಿ ರಾಜೇಶ್ ಕುಮಾರ್ ಬಾಳೆಕಲ್ಲು, ವಿ.ಕೆ.ಎಂ. ಅಶ್ರಫ್ ಮೇಗಿನಪೇಟೆ, ಅರುಣ ವಿಟ್ಲ, ಕುಶಲ ಎಂ ಪೆರಾಜೆ, ಲೂಯಿಸ್ ಮಸ್ಕರೇನಸ್, ಕಾರ್ಯದರ್ಶಿಯಾಗಿ ರವಿಪ್ರಕಾಶ್, ಜತೆ ಕಾರ್ಯದರ್ಶಿಗಳಾಗಿ ಅಶ್ರಫ್ ಒಕ್ಕೆತ್ತೂರು, ಎಲ್ಯಣ್ಣ ಪೂಜಾರಿ, ದಯಾನಂದ ಶೆಟ್ಟಿ ಉಜಿರೆಮಾರ್, ಕೋಶಾಧಿಕಾರಿಯಾಗಿ ನಟೇಶ್ ವಿಟ್ಲ ಹಾಗೂ ಕಾರ್ಯಕಾರಿಣಿ ಸಮಿತಿಗೆ 40 ಮಂದಿಯನ್ನು ನೇಮಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಶಿಯೇಶನ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಬಂಟ್ವಾಳ ತಾಲೂಕು ಕಾರ್ಯಾಧ್ಯಕ್ಷ ಬೇಬಿ ಕುಂದರ್, ಕಾರ್ಯದರ್ಶಿ ಬಾಲಕೃಷ್ಣ ಪಾಣೆಮಂಗಳೂರು, ಕಬಡ್ಡಿ ತೀರ್ಪುಗಾರ ಮಂಡಳಿ ದ.ಕ. ಜಿಲ್ಲಾ ಗೌರವಾಧ್ಯಕ್ಷ ಪ್ರೇಮನಾಥ ಉಳ್ಳಾಲ್, ಅಧ್ಯಕ್ಷ ಮೋನಪ್ಪ ಕುಳಾಯಿ, ಬಂಟ್ವಾಳ ತಾಲೂಕು ಅಧ್ಯಕ್ಷ ಕೃಷ್ಣಪ್ಪ ಬಂಗೇರ, ತಾಲೂಕು ಕಬಡ್ಡಿ ಅಸೋಶಿಯೇಶನ್ ಪದಾಧಿಕಾರಿಗಳಾದ ವಿದ್ಯಾಶಂಕರ್ ವಿಟ್ಲ, ಹಬೀಬು ಕೆ. ಮಾಣಿ, ವಸಂತ ವಿಟ್ಲ, ಝಕಾರಿಯ ಕಲ್ಲಡ್ಕ, ಸುದೀಪ್ ಶೆಟ್ಟಿ ಕೊಡಾಜೆ, ಹಮೀದ್ ಗೋಳ್ತಮಜಲು ಮೊದಲಾದವರು ಕಾರ್ಯಕ್ರಮದ ಯಶಸ್ವಿಯಾಗಿ ನಡೆಸುವರೇ ವಿವಿಧ ಸಲಹೆ ನೀಡಿದರು.