ಮಂಗಳೂರು: ಅ.10ರಂದು ನಕ್ಷತ್ರ ಯಾಗ
ಮಂಗಳೂರು: ನಗರದ ರಥಬೀದಿ ಆಚಾರ್ಯ ಮಠ ವಠಾರದಲ್ಲಿ ಸಾರ್ವಜನಿಕ ಶ್ರೀಶಾರದಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ಪ್ರಚಲಿತ ಶತಮಾನದಲ್ಲಿ ಪ್ರಥಮಬಾರಿಗೆ ರಾಶಿ ಮಂಡಲ ಪೂಜಾ ಪುರಸ್ಸರ ನಕ್ಷತ್ರ ಯಾಗ ಅ.11ರಂದು ಜರುಗಲಿದೆ ಎಂದು ಸಮಿತಿ ಅಧ್ಯಕ್ಷ ಉಮಾನಂದ ಮಲ್ಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಕ್ಷತ್ರ ರಾಶಿ ಪ್ರಕಾರ ಬೆಳಗ್ಗೆ 6.47ಕ್ಕೆ ಯಾಗ ಪ್ರಾರಂಭವಾಗಲಿದ್ದು, ಸಂಜೆ 6.18ಕ್ಕೆ ಮುಕ್ತಾಯವಾಗಲಿದೆ. 10ರಂದು ಶಾರದಾ ವಿಗ್ರಹ ಪ್ರತಿಷ್ಠೆ ನಡೆಯಲಿದೆ ಎಂದರು.