ಶ್ರೀ ರಾಮಕೃಷ್ಣ ಸೊಸೈಟಿಗೆ ರು. 2.17 ಕೋಟಿ ಲಾಭ
ಮಂಗಳೂರು: ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 2012-13ನೇ ಸಾಲಿನಲ್ಲಿ ರು. 2.17 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 20 ಡಿವಿಡೆಂಟ್ ನೀಡಿದೆ.
ಭಾನುವಾರ ನಗರದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ತಿಳಿಸಿದರು.
ಸಂಘದ ಉಪಾಧ್ಯಕ್ಷ ಕೆ. ಶ್ರೀಧರ ಶೆಟ್ಟಿ ವಾರ್ಷಿಕ ವರದಿ ಹಾಗೂ ಕಾರ್ಯಯೋಜನೆ ಮಂಡಿಸಿದರು. ನಿರ್ದೇಶಕ ಕೆ. ಜೈರಾಜ್ ಬಿ ರೈ, ಉಪನಿಬಂಧನೆ ತಿದ್ದುಪಡಿ ಹಾಗೂ ಲಾಭ ವಿಂಗಡನೆ ಹಾಗೂ ಪ್ರಭಾರ ಮಹಾಪ್ರಬಂಧಕ ಗಣೇಶ್ ಜಿ.ಕೆ. ಲೆಕ್ಕ ಪರಿಶೋಧಿತ ಆರ್ಥಿಕ ತನಿಖೆ ಹಾಗೂ ಬಜೆಟ್ ಮಂಡಿಸಿದರು.
ಸಂಘದ ನಿರ್ದೇಶಕರಾದ ಎ. ರತ್ನಕಾಂತಿ ಶೆಟ್ಟಿ, ಶಂಕರ ಮೋಹನ್ ಪೂಂಜಾ, ಡಾ.ಕೆ. ಸುಭಾಶ್ಚಂದ್ರ ಶೆಟ್ಟಿ, ಎಚ್.ಆರ್. ಶೆಟ್ಟಿ, ವಿಠಲ ಪಿ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ವಿಜಯ ರೈ, ರವೀಂದ್ರನಾಥ ಹೆಗ್ಡೆ, ಲೆಕ್ಕಪರಿಶೋಧಕರಾದ ಸುದೇಶ್ ಕುಮಾರ್ ಇದ್ದರು.
ಶಾಖಾಧಿಕಾರಿ ತನುಜಾ ಅಡ್ಯಂತಾಯ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಎಂ. ರಾಮಯ್ಯ ಶೆಟ್ಟಿ ವಂದಿಸಿದರು. ಮುಖ್ಯ ವ್ಯವಸ್ಥಾಪಕ ಮೋಹನ್ದಾಸ್ ಶೆಟ್ಟಿ ಹಾಗೂ ಕೇಂದ್ರ ಕಚೇರಿ ಸಿಬ್ಬಂದಿ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.