ಬಾಂಜಾರುಮಲೆಗೆ ಜಿಪಂ ಸಿಇಒ ಭೇಟಿ
ಬೆಳ್ತಂಗಡಿ: ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ತಾಲೂಕಿನ ದುರ್ಗಮ ಪ್ರದೇಶವಾದ ಬಾಂಜಾರು ಮಲೆಗೆ ಮಂಗಳವಾರ ಭೇಟಿ ನೀಡಿದರು.
ರೆಡ್ಕ್ರಾಸ್ ಸಂಸ್ಥೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗಿತ್ತು. 47 ಕುಟುಂಬದ 120 ಮಂದಿ ತಪಾಸಣೆ ಮಾಡಿಕೊಂಡರು. ಈ ವೇಳೆ ಅಂಗನವಾಡಿ, ರಸ್ತೆ, ಚರಂಡಿ, ವಿದ್ಯುತ್, ಸೇತುವೆಗಳ ಇತ್ಯಾದಿ ಬೇಡಿಕೆಗಳನ್ನು ಸ್ಥಳೀಯರು ಮುಂದಿಟ್ಟರು. ಅಂಗನವಾಡಿಗೆ ಸ್ಥಳೀಯ ಕಾರ್ಯಕರ್ತರನ್ನು ಉಚಿತವಾಗಿ ನೇಮಿಸಿಕೊಳ್ಳಿ, ಆಹಾರದ ಪೂರೈಕೆಗೆ ಆಡಳಿತದಿಂದ ವ್ಯವಸ್ಥೆ ಮಾಡಲಾಗುವುದು. ತಿಂಗಳಿಗೊಮ್ಮೆ ಆರೋಗ್ಯ ಶಿಬಿರದ ಬೇಡಿಕೆ ಬಂದಾಗ ನೆರಿಯದಲ್ಲಿ ವೈದ್ಯಾಧಿಕಾರಿ ಇಲ್ಲದಿರುವುದರಿಂದ ಆರೋಗ್ಯ ಸಹಾಯಕಿಯನ್ನು ತಿಂಗಳಿಗೊಮ್ಮೆ ಕಳುಹಿಸುವ ಏರ್ಪಾಟು ಮಾಡಲಾಗುವುದು. 10ನೇ ತರಗತಿ ಕಲಿತ ಮಹಿಳೆ ಇದ್ದರೆ ಅವರಿಗೆ ತರಬೇತಿ ನೀಡಿ ಆಶಾ ಕಾರ್ಯಕರ್ತೆಯನ್ನಾಗಿ ನೇಮಿಸುವ ಭರವಸೆ ನೀಡಿದರು.
ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ, ಒಂಬುಡ್ಸ್ಮೆನ್ ಸದಸ್ಯ ಕೃಷ್ಣ ಶೆಟ್ಟಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ನರೇಂದ್ರ ಮತ್ತಿತರರು ಇದ್ದರು.