ವರಳೆ ಸರೋಜ ನಕ್ಸಲ್ ಆರೋಪದಿಂದ ಮುಕ್ತಿ
ಮಂಗಳೂರು: ನಕ್ಸಲ್ ಪ್ರಕರಣಗಳೆಲ್ಲ ಖುಲಾಸೆಗೊಂಡ ಹಿನ್ನೆಲೆಯಲ್ಲಿ ವರಳೆ ಸರೋಜಾ ಬುಧವಾರ ಜೈಲ್ನಿಂದ ಬಿಡುಗಡೆಗೊಂಡರು.
ಉಡುಪಿ ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಬಿಡುಗಡೆ ವೇಳೆ ಮಾಧ್ಯಮ ಜತೆ ಮಾತನಾಡಿದ, ಸರೋಜ, 'ನಾನು ತಪ್ಪು ಮಾಡಿಲ್ಲ, ಸುಳ್ಳು ಕೇಸ್ ಹಾಕಿ ಜೈಲಿಗೆ ತಳ್ಳಿದರು. 4 ವರ್ಷ ಜೈಲ್ನಲ್ಲಿ ಇರಬೇಕಾಯಿತು. ನಾನು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟ ಮತ್ತು ಇತರ ಸಾಮಾಜಿಕ ಹೋರಾಟದಲ್ಲಿ ಗುರುತಿಸಿಕೊಂಡಿದ್ದೆ. ನನ್ನನ್ನು ನಕ್ಸಲ್ ಹಣೆ ಪಟ್ಟಿ ಹಚ್ಚಿ ಉಡುಪಿ ಎಸ್ಪಿ ಬಂಧಿಸಿದ್ದರು. ಚಿಕ್ಕಮಗಳೂರು, ಉಡುಪಿಯಲ್ಲಿ 22 ಕೇಸ್ ಹಾಕಿದ್ದರು. ಇದರಿಂದ ನನ್ನ ಮಗು ಕೂಡಾ 3 ವರ್ಷ ಜೈಲ್ನಲ್ಲಿ ಇರಬೇಕಾಯಿತು. ನಿಜವಾದ ಆರೋಪಿಗಳನ್ನು ಹಿಡಿಯಲಿ, ಅಮಾಯಕರ ಮೇಲೆ ಅನ್ಯಾಯ ಮಾಡಬಾರದು. ಶಿವಮೊಗ್ಗಕ್ಕೆ ಹಿಂದಿರುಗಿ ಜನಪರಹೋರಾಟ ಮುಂದುವರಿಸುತ್ತೇನೆ' ಎಂದರು. ಬಿಡಗಡೆ ವೇಳೆ ಸಹೋದರ, ಪತಿ ಸ್ವಾಗತಿಸಿದರು.