ಹಿರಿಯ ಸಾಹಿತಿ ಕಾಯರ್ಪಾಡಿ ಶಂಕರನಾರಾಯಣ ಭಟ್ ನಿಧನ
ಪುತ್ತೂರು: ಹಿರಿಯ ಸಾಹಿತಿ, ಆಶುಕವಿ, ಆಲಂಗಾರು ವೈದಿಕ ಮನೆತನದ ಕಾಯರ್ಪಾಡಿ ಶಂಕರನಾರಾಯಣ ಭಟ್ಟ ಮೂಡಾಜೆ(83) ಸ್ವಗೃಹದಲ್ಲಿ ಮಂಗಳವಾರ ರಾತ್ರಿ ನಿಧನರಾದರು.
ಯಕ್ಷಗಾನ ಪ್ರಸಂಗಗಳು, ಚುಟುಕ ಸಾಹಿತ್ಯ, ಷಟ್ಪದಿ ಕಾವ್ಯಗಳಲ್ಲಿ ಅವರು ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಅವರಿಗೆ ಸಾಮಾಜಿಕ ಕಾರ್ಯಕರ್ತ ಮೂಡಾಜೆ ವಿಠಲ ಭಟ್ ಸಹಿತ ಇಬ್ಬರು ಪುತ್ರರು ಹಾಗೂ ನಾಲ್ಕು ಮಂದಿ ಹೆಣ್ಣುಮಕ್ಕಳಿದ್ದಾರೆ. ಕವಿ ಶಂಕರನಾರಾಯಣ ಭಟ್ ನಿಧನಕ್ಕೆ ಸಚಿವ ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕಿ ಶಕುಂತಳಾ ಶೆಟ್ಟಿ, ವಸಂತ ಬಂಗೇರ, ಉಪ್ಪಿನಂಗಡಿ ಕನ್ನಡ ಸಂಗಮದ ಅಧ್ಯಕ್ಷ ಕಜೆ ಈಶ್ವರ ಭಟ್, ಹವ್ಯಕ ಮಹಾಮಂಡಲದ ಅಧ್ಯಕ್ಷ ಡಾ.ವೈ.ವಿ. ಕೃಷ್ಣಮೂರ್ತಿ ಸಂತಾಪ ವ್ಯಕ್ತಪಡಿಸಿದ್ದಾರೆ.