ಅಸಂಬದ್ಧ ಹೇಳಿಕೆ ನೀಡುವ ಅನಂತಮೂರ್ತಿ ಸರ್ವಜ್ಞರಲ್ಲ
ಮಂಗಳೂರು: 'ಬ್ರಾಹ್ಮಣರು ಗೋಮಾಂಸ ಸೇವಿಸುವ ಪರಿಪಾಠವಿತ್ತು' ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸಾಹಿತಿ ಯು.ಆರ್. ಅನಂತಮೂರ್ತಿಯವರಿಗೆ ಕನ್ನಡ ಸಾಹಿತ್ಯದ ಜ್ಞಾನಪೀಠ ಪ್ರಶಸ್ತಿ ನೀಡಿದ್ದೇ ಹೊರತು ಸರ್ವಜ್ಞ ಪ್ರಶಸ್ತಿಯಲ್ಲ ಎಂದು ಮಂಗಳೂರಲ್ಲಿ ನಡೆದ ತಂತ್ರಿಗಳ ಸಭೆಯಲ್ಲಿ ಅವರ ಹೇಳಿಕೆಯನ್ನು ಖಂಡಿಸಲಾಯಿತು.
ಇವರ ಅಸಂಬದ್ಧ ಹೇಳಿಕೆ ಹಿಂದೂ ಸಮಾಜದ ಸಾಮರಸ್ಯ ಕದಡುವ ಹುನ್ನಾರ. ಸನಾತನ ಹಿಂದೂ ಅನುಯಾಯಿಗಳಿಗೆ ಈ ಹೇಳಿಕೆ ನೋವು ತಂದಿದೆ. ಹಿಂದೂ ಗ್ರಂಥಗಳನ್ನು ಪೂಜಿಸುವ ಸಂದರ್ಭದಲ್ಲಿ ಇಂಥ ಹೇಳಿಕೆ ನೀಡಿರುವುದು ಸೂಕ್ತವಲ್ಲ. ಸಭೆಯಲ್ಲಿ ಪಂಡಿತ್ ನರಸಿಂಹ ಆಚಾರ್ಯ, ತಂತ್ರಿಗಳಾದ ಡಾ. ಶಿವಪ್ರಸಾದ್ ತಂತ್ರಿ, ಅನಂತ ಅಸ್ರಣ್ಣ, ಸುಕುಮಾರ ಶಾಸ್ತ್ರಿ, ಚೆಂಪಿ ರಾಮಚಂದ್ರ ಭಟ್, ವನದುರ್ಗಾ ದೇವರ ಧರ್ಮದರ್ಶಿ ರಾಜೇಶ್ ರಾವ್, ರೆಂಜಾಳ್ ಶ್ರೀಕರ ಪ್ರಭು, ವಿದ್ವನ್ ಹರಿಪ್ರಸಾದ್ ಶರ್ಮ, ಕಲ್ಲಡ್ಕ ಡಾ. ಪ್ರಭಾಕರ ಭಟ್ ಹಾಜರಿದ್ದರು.