ಪೆರಾಬೆ: ಎಂಡೋಪೀಡಿತ ಯುವಕ ಸಾವು
ಉಪ್ಪಿನಂಗಡಿ: ಎಂಡೋ ಪೀಡಿತನಾಗಿ ನರಕಯಾತನೆಯ ಬದುಕು ನಡೆಸುತ್ತಿದ್ದ ಪುತ್ತೂರು ತಾಲೂಕು ಪೆರಾಬೆ ಗ್ರಾಮದ ಸಂದೀಪ್ (24) ಬುಧವಾರ ಮಂಗಳೂರಿನಲ್ಲಿ ಮೃತಪಟ್ಟಿದ್ದಾನೆ. ನಾರಾಯಣ ರೈ ಹಾಗೂ ಇಂದಿರಾ ದಂಪತಿ ಮೊದಲ ಮಗನಾಗಿರುವ ಸಂದೀಪ್ ಹುಟ್ಟಿನಿಂದಲೇ ಅಂಗವಿಕಲ ಹಾಗೂ ಬುದ್ಧಿಮಾಂದ್ಯನಾಗಿದ್ದು ಮಲಗಿದಲ್ಲೇ ಇದ್ದು ಅಕ್ಷರಶಃ ನರಕಯಾತನೆಯ ಬದುಕು ನಡೆಸುತ್ತಿದ್ದ. ಜಪ್ಪಿನಮೊಗರುವಿನಲ್ಲಿರುವ ಮೃತನ ಮನೆಗೆ ಪುತ್ತೂರು ತಾಲೂಕು ಎಂಡೋ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್, ಜಯ ಕರ್ನಾಟಕ ಆಲಂಕಾರು ಘಟಕದ ಅಧ್ಯಕ್ಷ ಕಮಾಲಾಕ್ಷ ರೈ ಮನವಳಿಕೆ, ನಿವೃತ್ತ ಶಿಕ್ಷಕ ರಮಾನಾಥ ರೈ, ರಾಮ ಮೋಹನ ರೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.