ಮಕ್ಕಳ ವರ್ತನೆಗೆ ಬೇಸತ್ತು ನಾಪತ್ತೆ ಆಗಿದ್ದ ತಾಯಿ ಧರ್ಮಸ್ಥಳದಲ್ಲಿ ಪತ್ತೆ
ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪದ್ಮನೂರು ನಿವಾಸಿ ರಾಧಾ(55) ಎಂಬವರು ಕೆಲವು ದಿನಗಳ ಹಿಂದೆ ಮನೆಯಿಂದ ಹೊರಟವರು ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದಾರೆ. ಇವರು ನಾಪತ್ತೆ ಆಗಿರುವುದಾಗಿ ಅವರ ಮಗ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮೂಲ್ಕಿ ಪೊಲೀಸರು ರಾಧಾ ಅವರನ್ನು ಧರ್ಮಸ್ಥಳದಲ್ಲಿ ಪತ್ತೆ ಹಚ್ಚಿ ಕರೆತಂದಿದ್ದಾರೆ. ಮನೆಯಲ್ಲಿ ಮಕ್ಕಳ ವರ್ತನೆಯಿಂದ ಬೇಸತ್ತು ಮನೆ ಬಿಟ್ಟಿರುವುದಾಗಿ ರಾಧಾ ತಿಳಿಸಿದ್ದು ಮೂಲ್ಕಿ ಪೋಲಿಸ್ ಠಾಣಾ ಉಪನಿರೀಕ್ಷಕ ಸೋಮಯ್ಯ ರಾಧಾ ಅವರ ಮಕ್ಕಳಿಗೆ ಬುದ್ಧಿವಾದ ಹೇಳಿ ಮರಳಿ ಮನೆಗೆ ಸೇರ್ಪಡಿಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.
ಅಪರಿಚಿತ ವ್ಯಕ್ತಿ ಸಾವು
ಮಂಗಳೂರು: ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯ ಕಾಯರ್ ಮಂಚ್ ಕಟ್ಟಡದ ಮುಂಭಾಗ ರಸ್ತೆ ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ 45 ವರ್ಷದ ಅಪರಿಚಿತ ವ್ಯಕ್ತಿ ವೆನ್ಲಾಕ್ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿರುತ್ತಾರೆ. ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹವನ್ನು ಇರಿಸಲಾಗಿದೆ. ಕಪ್ಪು ಮೈ ಬಣ್ಣ, ಸಪೂರ ಶರೀರ ಹೊಂದಿದೆ. ಎದೆಯ ಮಧ್ಯಭಾಗದಲ್ಲಿ ಕಪ್ಪು ಮಚ್ಚೆಯಿದೆ. ಕೆಂಪು ಟಿ ಶರ್ಟ್ ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಸಂಬಂಧಪಟ್ಟ ವಾರಸುದಾರರು ಬರ್ಕೆ ಠಾಣೆ 0824-2220522 ಸಂಪರ್ಕಿಸಬಹುದು.