ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಮಾಜ ಸೇವೆ ನೆಪದಲ್ಲಿ ಮನೆ ಕಳವು: ಇಬ್ಬರ ಸೆರೆ

Vishwanath S
Updated On : 2 Apr 2014, 11:28 am

ಉಡುಪಿ: ಬೆಂಗಳೂರಿನ ಮಾಗಡಿ ರಸ್ತೆಯ ಶ್ರೇಯಸ್ ವೃದ್ಧಾಶ್ರಮ ಎಂಬ ಸುಳ್ಳು ಸಂಸ್ಥೆಗೆ ಹಳೆಯ ಬಟ್ಟೆಗಳನ್ನು ಸಂಗ್ರಹಿಸುವ ನೆಪದಲ್ಲಿ ಹಗಲಲ್ಲಿ ತಿರುಗಾಡುತ್ತಾ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ, ರಾತ್ರಿ ಕಳವು ಮಾಡುತ್ತಿದ್ದ ಇಬ್ಬರನ್ನು ಉಡುಪಿ ಪೊಲೀಸರು ಬಂಧಿಸಿದ್ದು, ಹತ್ತಾರು ಪ್ರಕರಣಗಳನ್ನು ಭೇದಿಸಿದ್ದಾರೆ, ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಕೇರಳದ ಕೋಝಿಕೋಡು ಜಿಲ್ಲೆಯ ವಡಗಾರ ಗ್ರಾಮದ ಮಹೇಶ (19) ಮತ್ತು ಬೆಂಗಳೂರಿನ ನಾಗರಬಾವಿ ಸಮೀಪದ ಸರಸ್ವತಿ ನಗರದ ಮಣಿಕಂಠ (19) ಎಂದು ಗುರುತಿಸಲಾಗಿದೆ.
ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ ಬಿ. ನಾಯಕ್ ಮತ್ತು ಅಪರಾಧ ಪತ್ತೆ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ವಿವರ: ಮಾ. 13ರಂದು ಉಡುಪಿ ತಾಲೂಕು ಕಚ್ಚೂರು ಗ್ರಾಮದ ಮನೆಯೊಂದರಲ್ಲಿ ನಡೆದ ಕಳವು ಪ್ರಕರಣದಲ್ಲಿ ಪೊಲೀಸರು ಮೊಬೈಲ್ ಫೋನ್ಗಳ ಜಾಡು ಹಿಡಿದು  ಈ ಕಳ್ಳರನ್ನು ಬಂಧಿಸಿದ್ದಾರೆ.
ಅವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಅವರು ಜನವರಿಯಿಂದ ಈ ತನಕ ಉಡುಪಿ, ಕುಂದಾಪುರ, ಮಂಗಳೂರು, ಕಾರ್ನಾಡು, ಐಕಳ, ಬೆಳ್ತಂಗಡಿ ಕಡೆಗಳಲ್ಲಿ ಹತ್ತಾರು ಕಳ್ಳತನಗಳನ್ನು ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇವರಿಂದ ಸುಮಾರು 490.280 ಗ್ರಾಂ. ಚಿನ್ನಾಭರಣ ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ ಸುಮಾರು ರು. 13,23,000.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement