ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಪಘಾತ ಅಲ್ಲ, ಕೊಲೆ

Mainashree
Updated On : 3 Apr 2014, 12:25 pm

ಮಂಗಳೂರು: ತಣ್ಣೀರುಬಾವಿ ಬೀಚ್‌ನಲ್ಲಿ ಬೈಕ್ ವೇಗವಾಗಿ ಚಲಾಯಿಸಿ ಮೃತಪಟ್ಟ ಪ್ರಕರಣ ಕೊಲೆ ಎಂಬ ಸಂಶಯ ಇದೆ ಎಂದು ಹೆತ್ತವರು ಪತ್ರಿಕಾ ಹೇಳಿಕೆ ಮೂಲಕ ಆರೋಪ ಮಾಡಿದ್ದಾರೆ. ಅತಿ ವೇಗವಾಗಿ ಬೈಕ್ ಚಲಾಯಿಸುವಾಗ ಮರಕ್ಕೆ ಡಿಕ್ಕಿಯಾಗಿ ದೇಹದಿಂದ ತಲೆ ಬೇರ್ಪಟ್ಟು ಅಷ್ಟು ದೂರ ಬೀಳುವಾಗ ತಲೆ ತುಂಬ ಮಣ್ಣು, ಧೂಳು ಮೆತ್ತಿರುತ್ತದೆ. ಆದರೆ ಮುಖದಲ್ಲಿ ಸ್ವಲ್ಪವೂ ಮಣ್ಣು ಮೆತ್ತಿರಲಿಲ್ಲ. ನಾವು ಈ ರೀತಿಯ 40ಕ್ಕೂ ಹೆಚ್ಚು ಪ್ರಶ್ನೆ ಮತ್ತು ಸಂಶಯವನ್ನು ಪೊಲೀಸರ ಮುಂದಿಟ್ಟರೂ ಅವರು ಅದನ್ನು ಅಪಘಾತ ಪ್ರಕರಣವಾಗಿ ದಾಖಲಿಸಿದ್ದಾರೆ. ಸಿಸಿಟಿವಿ ಫೂಟೇಜ್ ಇಲ್ಲ, ಇದುವರೆಗೆ ಈ ಘಟನೆ ನೋಡಿರುವುದಾಗಿ ಯಾರು ಮುಂದೆ ಬಂದಿಲ್ಲ. ಈಗ ಪ್ರಕರಣಕ್ಕೆ ಈಗ ಪ್ರತ್ಯಕ್ಷ ಸಾಕ್ಷಿ ಇರುವುದಾಗಿ ಹೇಳುತ್ತಿದ್ದಾರೆ.
ಈ ಎಲ್ಲ ಪ್ರಶ್ನೆಗಳಿಗೆ ವೈಜ್ಞಾನಿಕವಾಗಿ ಮನವರಿಕೆ ಮಾಡುವವರಿಗೆ ನಾವು ಇದು ಅಪಘಾತ ಎಂದು ನಂಬಲು ಸಾಧ್ಯವೇ ಇಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಎಂ.ಎಸ್.ರಾಧಾಕೃಷ್ಣನ್ ಆರೋಪಿಸಿದ್ದಾರೆ.
ರೋಹಿತ್ ರಾಧಾಕೃಷ್ಣನ್ (22)ಮಾ.23ರಂದು ಬೆಳಗ್ಗಿನ ಜಾವ ದೇಹದಿಂದ ತಲೆ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಕೇರಳದ ಎಂ.ಎಸ್.ರಾಧಾಕೃಷ್ಣನ್, ಶ್ರೀದೇವಿ ದಂಪತಿ ತನ್ನ ಒಬ್ಬನೇ ಮಗ.

-

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement