ತ್ರಿಕೋನ ಪ್ರೇಮಕ್ಕೆ ಯುವಕ ಬಲಿ: ಇಬ್ಬರಿಗೆ ನ್ಯಾಯಾಂಗ ಬಂಧನ
ಮೂಲ್ಕಿ: ತ್ರಿಕೋನ ಪ್ರೇಮ ಪ್ರಕರಣದಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಾವಂಜೆ ಸೇತುವೆ ಬಳಿ ಮಂಗಳವಾರ ಮುಂಜಾನೆ ಸಿನಿಮೀಯವಾಗಿ ಮೃತಪಟ್ಟ ಕಾರ್ಕಳ ಬೋಳ ನಿವಾಸಿ ಅವಿನಾಶ್ ಪೂಜಾರಿ (21) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮೇಲ್ನೋಟಕ್ಕೆ ಅಪಘಾತವೆಂದು ಕಂಡುಬಂದ ಪ್ರಕರಣದಲ್ಲಿ ಕೊಲೆ ಶಂಕೆ ಎಂದು ಅವಿನಾಶ್ ತಂದೆ ದೂರು ನೀಡಿದ್ದರು. ಈ ಹಿನ್ನೆಲೆ ತನಿಖೆ ನಡೆಸಿದ ಮೂಲ್ಕಿ ಪೋಲಿಸರು ಮಂಗಳೂರಿನ ಮುಳಿಹಿತ್ಲು ನಿವಾಸಿ ಹರೀಶ್ ಮತ್ತು ಮೂಲ್ಕಿಯ ಕಾರ್ನಾಡು ಪಡುಬೈಲು ನಿವಾಸಿ ಸುಷ್ಮಾ ಪ್ರೆಸಿಲ್ಲಾರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹಿನ್ನೆಲೆ: ವೃತ್ತಿಯಲ್ಲಿ ಬಸ್ ಚಾಲಕರಾಗಿರುವ ಅವಿನಾಶ್ ಪೂಜಾರಿ ಮೂರು ವರ್ಷಗಳಿಂದ ಮೂಲ್ಕಿಯ ಕಾರ್ನಾಡಿನ ಮಸೀದಿಯ ಬಳಿಯಿರುವ ಎಲೆಕ್ಟ್ರೀಷಿಯನ್ ಹೆನ್ರಿ ಮಾಬೆನ್ ಮಗಳು ಸುಷ್ಮಾ ಪ್ರೆಸಿಲ್ಲಾರನ್ನು ಪ್ರೀತಿಸುತ್ತಿದ್ದ. ಮದುವೆಯಾಗುವುದಾಗಿ ಒಪ್ಪಿದ್ದು ಸುಷ್ಮಾ ಕಾಲೆಜಿಗೆ ಹೋಗುತ್ತಿದ್ದ ಸಂದರ್ಭ ರಿಕ್ಷಾ ಚಾಲಕನಾಗಿದ್ದ ಅವಿನಾಶ್ನ್‌ಡುವೆ ಪ್ರೀತಿ ಮೂಡಿದ್ದು ಈ ಬಗ್ಗೆ ಮನೆಯವರಿಗೆ ತಿಳಿದು ಸುಷ್ಮಾಳ ತಂದೆ ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದರು. ಕಾಲೇಜು ಮುಗಿದ ಬಳಿಕ ಮಂಗಳೂರಿನಲ್ಲಿ ಕಾಲ್‌ಸೆಂಟರ್‌ನಲ್ಲಿ ಉದ್ಯೋಗಕ್ಕೆ ಸೇರಿದ್ದ ಸುಷ್ಮಾ ಕ್ರಮೇಣ ಅವಿನಾಶ್‌ನನ್ನು ಕಡೆಗಣಿಸಲು ಆರಂಭಿಸಿದಳು. ಬಳಿಕ, ಕಾಲ್‌ಸೆಂಟರ್‌ನ ವಾಹನ ಚಾಲಕ ಚಾಲಕ ಹರೀಶ್‌ನೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದಳು ಎನ್ನಲಾಗಿದೆ.
ಈ ಒಡನಾಟದ ಬಗ್ಗೆ ತಿಳಿದ ಅವಿನಾಶ್ ಹರೀಶ್‌ಗೆ ಎಚ್ಚರಿಕೆ ನೀಡಿದ್ದು ಎಚ್ಚರಿಕೆ ನೀಡಿದ್ದ. ಮಾ.30ರಂದು ರಾತ್ರಿ ಮಂಗಳೂರಿನ ಕಾಲ್‌ಸೆಂಟರ್‌ಗೆ ಹೋಗಿ ಭದ್ರತಾ ಸಿಬ್ಬಂದಿಯಲ್ಲಿ ಸುಷ್ಮಾಳ ಜೊತೆ ಮಾತನಾಡಲಿದೆಯೆಂದು ತಿಳಿಸಿದ್ದ. ಆ ಸಂದರ್ಭ ಬಂದ ಸುಷ್ಮಾ ತನಗೆ ಪರಿಚಯವಿಲ್ಲವೆಂದು ಸಾಗಹಾಕಿದ್ದು ಭದ್ರತಾ ಸಿಬ್ಬಂದಿ ಅವಿನಾಶ್‌ನನ್ನು ಪೊಲೀಸರಿಗೊಪ್ಪಿಸಿದ್ದು ಬಳಿಕ ರಾತ್ರಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.
ಏ.1ರ ಬೆಳಗ್ಗಿನ ಅವಧಿಯಲ್ಲಿ ಮುಕ್ಕದ ಬಳಿ ಟಾಟಾ ಸುಮೋ ಬರುವ ಅವಧಿಯಲ್ಲಿ ಕಾದು ಕುಳಿತಿದ್ದ. ವಾಹನ ಮುಕ್ಕದಲ್ಲಿ ಬಂದ ಸಂದರ್ಭಮಾತನಾಡಲು ಸಾಧ್ಯವಾಗದಿದ್ದಾಗ ಬೈಕ್‌ನಲ್ಲಿ ಮುಂದೆ ಹೋಗಿ ಪಾವಂಜೆಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ನಿಲ್ಲಿಸಿ ಸುಮೋವನ್ನು ಕಾಯುತ್ತ ನಿಂತಿದ್ದ ಸಂದರ್ಭದಲ್ಲಿ ಸುಮೋವನ್ನು ಚಾಲನೆ ಮಾಡಿಕೊಂಂಡು ಬಂದ ಹರೀಶ್ ಅವಿನಾಶ್ ಮೇಲೆ ವಾಹನ ಚಲಾಯಿಸಿ ಅಪಘಾತ ನಡೆಸಿದ್ದಾಗಿ ದೂರಲಾಗಿದೆ. ಅಪಘಾತದ ರಭಸಕ್ಕೆ ಅವಿನಾಶ್ ಸ್ಥಳದಲ್ಲಿ ಮೃತಪಟ್ಟಿದ್ದು ಮೃತದೇಹ ಹೆದ್ದಾರಿಯ ಡಿವೈಡರ್ ಮೇಲೆ ಬಿದ್ದಿದ್ದು ಮೇಲ್ನೋಟಕ್ಕೆ ಅಪಘಾತವೆಂದು ಭಾಸವಾಗುವಂತಿತ್ತು.
ಆದರೆ, ಅವಿನಾಶ್ ತಂದೆ ನೀಡಿದ ದೂರಿನಿಂದ ನೈಜ ಘಟನೆಯು ಹೊರ ಬಂದಿದ್ದು ಆರೋಪಿಗಳಿಬ್ಬರು ಜೈಲು ಸೇರುವಂತಾಗಿದೆ.