ಬೆಂಕಿ ಆಕಸ್ಮಿಕ; ಗುಡಿಸಲು ಸಹಿತ ವೃದ್ಧ ಭಸ್ಮ
ಉಪ್ಪಿನಂಗಡಿ: ಬೀಡಿ ಬ್ರಾಂಚ್ ಆಗಿ ಬಳಕೆಯಾಗುತ್ತಿದ್ದ ಗುಡಿಸಲಿಗೆ ಬೆಂಕಿ ತಗುಲಿ ವೃದ್ಧ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಸಾವೀಗೀಡಾದವರನ್ನು ಕರಾಯ ಗ್ರಾಮ ನಿವಾಸಿ ಅಬ್ಬೋನು ಅಲಿಯಾಸ್ ಅಬ್ದುಲ್ ರಹಿಮಾನ್ (65) ಎಂದು ಗುರುತಿಸಲಾಗಿದೆ.
ಇವರು ತನ್ನ ಮನೆ ಸಮೀಪ ಗುಡಿಸಲು ನಿರ್ಮಿಸಿ ಅದರಲ್ಲಿ ಬೀಡಿ ಬ್ರಾಂಚ್ ವ್ಯವಹಾರ ನಡೆಸುತ್ತಿದ್ದರು. ಆಕಸ್ಮಿಕವಾಗಿ ಬೆಂಕಿ ತಗುಲಿ ಇಡೀ ಗುಡಿಸಲು ಅಗ್ನಿಗಾಹುತಿಯಾಗಿದ್ದು, ಅದರೊಳಗೆ ಸಿಲುಕಿ ಅಬ್ಬೋನು ಸುಟ್ಟು ಕರಕಲಾಗಿದ್ದಾರೆ.