ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಲೋವೋಲ್ಟೇಜ್ ಸಮಸ್ಯೆ ನಿವಾರಣೆಗೆ ಆಗ್ರಹ

Mainashree
Updated On : 4 Apr 2014, 10:31 am

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಹಲವು ಗ್ರಾಮಗಳಲ್ಲಿ ಸತತ ಲೋವೋಲ್ಟೇಜ್ ವಿದ್ಯುತ್‌ನಿಂದಾಗಿ ರೈತಾಪಿ ವರ್ಗ ಸಮಸ್ಯೆಗೆ ತುತ್ತಾಗುತ್ತಿದೆ ಎಂದು ಆರೋಪಿಸಿ ರೈತ ಸಂಘದ ವತಿಯಿಂದ ಗುರುವಾರ ಕಲ್ಲೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.  ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಕಲ್ಲೇರಿಯಲ್ಲಿ ನಿರ್ಮಾಣಗೊಂಡಿರುವ 110 ಕೆವಿ ಸಬ್ ಸ್ಟೇಷನ್ ಕಾರ್ಯಾರಂಭ ಮಾಡಿದರೆ ಲೋವೋಲ್ಟೇಜ್ ಸಮಸ್ಯೆ ನಿವಾರಣೆಯಾಗುವುದಾದರೂ , ಈ ಬಗ್ಗೆ ಆಡಳಿತ ವ್ಯವಸ್ಥೆ ಕಾಳಜಿ ವಹಿಸದಿರುವ ಬಗ್ಗೆ ಬೆಳ್ತಂಗಡಿ ಪರಿಸರದ ಹಲವು ಗ್ರಾಮಗಳ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.  ಈ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದ ಈ ಸಮಯದಲ್ಲೇ ರೈತ ಸಂಘದ ಕಾರ್ಯಕರ್ತರು ಪ್ರತಿಭಟಿಸಲು ಮುಂದಾಗಿದ್ದರೂ ಇಲಾಖಾ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಆಗ್ರಹ ಮತ್ತು ಮನವಿ ಸಲ್ಲಿಕೆ ನಡೆಸಿದ್ದರು. ರೈತ ಸಂಘದ ಒತ್ತಡಕ್ಕೆ ಮಣಿದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ಬಸವರಾಜ್ ಸ್ಥಳಕ್ಕಾಗಮಿಸಿ ಮುಂದಿನ ಎಂಟು ದಿನಗಳ ಅವಧಿಯಲ್ಲಿ ಇಲಾಖಾ ಮಟ್ಟದ ಕ್ರಮ ಜರಗಿಸಿ 110 ಕೆವಿ ಸಾಮರ್ಥ್ಯದ ಸಬ್ ಸ್ಟೇಷನ್ ಕಾರ್ಯಾರಂಭಕ್ಕೆ ಯತ್ನಿಸುವುದಾಗಿ ಭರವಸೆ ನೀಡಿದರು. ಅಧಿಕಾರಿಗಳ ಮಾತನ್ನು ಒಪ್ಪಿದ ರೈತ ಸಂಘದವರು 110 ಕೆವಿ ಸಾಮರ್ಥ್ಯದ ಸಬ್ ಸ್ಟೇಷನ್ ಕಾರ್ಯಾರಂಭವಾಗದಿದ್ದರೆ ಏ.14ರಂದು ಕಲ್ಲೇರಿ ಸಬ್ ಸ್ಟೇಷನ್ ಮುಂಭಾಗ ಉಗ್ರ ಚಳುವಳಿ ನಡೆಸಲಾಗುತ್ತದೆ ಎಂದು ಎಚ್ಚರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement