ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉಳೆಪಾಡಿ ದೇಗುಲ: ಮೇ 25ರಂದು ಸಾಮೂಹಿಕ ವಿವಾಹ

Vishwanath S
Updated On : 5 Apr 2014, 11:13 am

ಮೂಲ್ಕಿ: ಉಳೆಪಾಡಿಯ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ದೇವಳದ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಮೇ 25ರಂದು ಮಧ್ಯಾಹ್ನ ದೇವಳದಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ.
  ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಮುಂಬೈನ ಉದ್ಯಮಿ ವಿರಾರ್ ಶಂಕರ್ ಶೆಟ್ಟಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ನೇತೃತ್ವ ವಹಿಸುವರು.
  ವಧುವಿಗೆ ಸೀರೆ, ರವಿಕೆ ಕಣ, ಕರಿಮಣಿ-ತಾಳಿ ಹಾಗೂ ವರನಿಗೆ ಧೋತಿ, ಶಾಲು, ಪೇಟ ನೀಡಲಾಗುವುದು. ವಿಚ್ಛೇದಿತರಿಗೆ ಕೂಡ ಅವಕಾಶವಿದ್ದು ಆಸಕ್ತರು ಏ.15ರ ಒಳಗೆ ಸಂಪರ್ಕಿಸುವಂತೆ ಹೆಚ್ಚಿನ ಮಾಹಿತಿಗಾಗಿ ಧರ್ಮದರ್ಶಿ ಮೋಹನ್‌ದಾಸ್ ಸುರತ್ಕಲ್ (9945933837, 7760381550, 9743476505)ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ: 987 ಅಭ್ಯರ್ಥಿಗಳು ಗೈರು
ಮಂಗಳೂರು/ಮಣಿಪಾಲ: ದ.ಕ., ಉಡುಪಿಯಲ್ಲಿ ಶುಕ್ರವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 987 ಮಂದಿ ಗೈರು ಹಾಜರಾಗಿದ್ದಾರೆ. ಉಡುಪಿಯ 59 ಕೇಂದ್ರಗಳಲ್ಲಿ ಶುಕ್ರವಾರ ನಡೆದ ಎಸ್‌ಎಸ್‌ಎಲ್‌ಸಿಯ ತೃತೀಯ ಭಾಷೆ ಹಿಂದಿ ಪರೀಕ್ಷೆಗೆ 15,151 ರೆಗ್ಯುಲರ್ ವಿದ್ಯಾರ್ಥಿಗಳು ಹಾಜರಾಗಿದ್ದು, 137 ಮಂದಿ ಹಾಗೂ ಖಾಸಗಿಯಾಗಿ 584 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 98 ಮಂದಿ ಗೈರು ಹಾಜರಾಗಿದ್ದರು.
ಗುರುವಾರ ನಡೆದ ವಿಜ್ಞಾನ ಪರೀಕ್ಷೆಗೆ ಒಟ್ಟು 15,076 ರೆಗ್ಯುಲರ್ ವಿದ್ಯಾರ್ಥಿಗಳು ಹಾಜರಾಗಿದ್ದು, 153 ಮಂದಿ ಗೈರು ಹಾಜರಾಗಿದ್ದರು. ಖಾಸಗಿಯಾಗಿ 655 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 103 ಮಂದಿ ಗೈರು ಹಾಜರಾಗಿದ್ದರು.
ಮಂಗಳೂರು ವರದಿ: ದ.ಕ. ಜಿಲ್ಲೆಯಲ್ಲಿ ಏ. 4 ರಂದು ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹಿಂದಿ ವಿಭಾಗದಲ್ಲಿ 33478 ಮಂದಿ ನೋಂದಾಯಿಸಿಕೊಂಡಿದ್ದು, 32726 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟು 752 ಮಂದಿ ಗೈರಾಗಿದ್ದಾರೆ ಎಂದು ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement