ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ತಾಂತ್ರಿಕ ಅಧ್ಯಯನದ ಜೊತೆಗೆ ಕಲೆ, ಸಾಹಿತ್ಯ ಅಭಿರುಚಿಯಿರಲಿ: ನಾಗತಿಹಳ್ಳಿ

Vishwanath S
Updated On : 5 Apr 2014, 11:13 am

ಮಂಗಳೂರು: 'ವಿದೇಶಿ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಹಾಗೂ ವೈದ್ಯಕೀಯ ಅಧ್ಯಯನ ಜತೆಗೆ ಕಲೆ, ಸಾಹಿತ್ಯದ ಅಭಿರುಚಿ ಹೆಚ್ಚಿನ ಪ್ರಮಾಣದಲ್ಲಿದೆ. ಭಾರತ ವಿದ್ಯಾರ್ಥಿಗಳು ಇದನ್ನು ಅನುಸರಿಸುವುದು ಸೂಕ್ತ' ಎಂದು ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
 ಮೂಡುಬಿದಿರೆ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂರು ದಿನಗಳ ಕಾಲ ನಡೆಯುವ 'ಚಕ್ರವ್ಯೂಹ' ರಾಜ್ಯಮಟ್ಟದ ಅಂತರ್‌ಕಾಲೇಜು ತಾಂತ್ರಿಕ ಹಾಗೂ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
 ವಿದ್ಯಾರ್ಥಿ ಜೀವನವೆಂಬುವುದು ಮಹತ್ವದ ಘಟ್ಟ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಂಶೋಧನಾತ್ಮಕವಾಗಿ ವಿಷಯಗಳನ್ನು ಅಧ್ಯಯನ ಮಾಡಬೇಕು. ಇದು ಎಲ್ಲ ಕ್ಷೇತ್ರಗಳಿಗೂ ಅನ್ವಯವಾಗುತ್ತದೆ. ಬುದ್ದಿ ಮತ್ತು ಭಾವಗಳ ಸಮತೋಲನ ಕಾಯ್ದಿರಿಸಿದಲ್ಲಿ ವ್ಯಕ್ತಿಯೊಬ್ಬನ ಪರಿಪೂರ್ಣ ವ್ಯಕ್ತಿತ್ವಕ್ಕೆ ವಿಶೇಷ ಆಯಾಮ ನೀಡುತ್ತದೆ. ಹೊಸ ಚಿಗುರು ಕಾಣಿಸಿಕೊಳ್ಳಬೇಕಾದರೆ ಹಳೆ ಬೇರು ಇರಬೇಕಾದದ್ದು ಮುಖ್ಯ ಎಂದು ಹೇಳಿದರು.
 ಇದೇ ಸಂದರ್ಭ ಕಾಲೇಜಿನ ಧ್ವನಿ ತಂಡದವರು ರೂಪಿಸಿದ ಬಹುಭಾಷಾ  ವಿಡಿಯೋ ಆಲ್ಬಂನ್ನು ನಾಗತಿಹಳ್ಳಿ ಚಂದ್ರಶೇಖರ್ ಬಿಡುಗಡೆಗೊಳಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಮಾತನಾಡಿದರು.
 ಮಾಜಿ ಸಚಿವ ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿಗಳಾದ ವಿವೇಕ್ ಆಳ್ವ, ಜಯಶ್ರೀ ಅಮರನಾಥ ಶೆಟ್ಟಿ, ವಿದ್ಯಾರ್ಥಿ ಸಂಯೋಜಕಿ ಶ್ರೇಷ್ಠಾ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಪ್ರೊ. ಅಲೆಕ್ಸಾಂಡರ್ ಮಾಥ್ಯೂ, ಚಕ್ರವ್ಯೂಹ ಸಂಯೋಜಕ ಡಾ. ಕಿಶೋರ್ ಶೆಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement