ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪ್ರೇಯಸಿಯ ಚಿನ್ನ ಕದ್ದು ಮಿಸ್ಡ್ ಕಾಲ್ ಪ್ರೇಮಿ ಪರಾರಿ!

Mainashree
Updated On : 5 Apr 2014, 11:31 am

ಬಂಟ್ವಾಳ: ಮೊಬೈಲ್ ಮಿಸ್ಡ್‌ಕಾಲ್ ಏನೇನು ಅವಾಂತರಗಳನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ. ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ಯುವತಿಯೊಬ್ಬಳಿಗೆ ಅಪರಿಚಿತ ಯುವಕನಿಂದ ಬಂದ ಮಿಸ್ಡ್‌ಕಾಲ್ ಪರಿಚಯಕ್ಕೆ ತಿರುಗಿ, ಆತ ಮನೆಗೂ ಆಗಮಿಸಿ ಆಕೆಯ ಚಿನ್ನಾಭರಣ ಪಡೆದು ಪರಾರಿಯಾದ ಪ್ರಕರಣ ನಡೆದಿದೆ. ಯುವಕ ತನ್ನ ಹೆಸರನ್ನು ಸುಭಾಷ್ ಎಂದು ಹೇಳಿಕೊಂಡಿದ್ದು, ವಿಳಾಸವನ್ನು ಯುವತಿ ವಿಚಾರಿಸಿಲ್ಲ ಎನ್ನಲಾಗಿದೆ. ದೂರವಾಣಿ ಮೂಲಕವೇ ಯುವತಿಯ ಹೆಸರು, ವಿಳಾಸ ಪಡೆದು ಕೆಲವು ದಿನಗಳ ಹಿಂದೆ ಆಕೆಯ ಮನೆಗೆ ಬಂದಿದ್ದ. ಈ ಸಂದರ್ಭದಲ್ಲಿ ಸುಭಾಷ್ ಆಕೆಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಬಳಿಕ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಕಿವಿಯಲ್ಲಿದ್ದ ಚಿನ್ನದ ಬೆಂಡೋಲೆ ಪಡೆದು ಅದನ್ನು ಕಲ್ಲಡ್ಕದ ಸಹಕಾರಿ ಬ್ಯಾಂಕ್‌ವೊಂದರಲ್ಲಿ ಅಡವಿಟ್ಟು ಪರಾರಿಯಾಗಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement